ಅಕ್ರಮದ ನಡುವೆಯೆ ‘ಚಿಲುಮೆ’ಯಿಂದ ಟೆಂಡರ್ ಲಾಬಿ

ಬೆಂಗಳೂರು, ನ.25- ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಟೀಕೆಗೆ ಗುರಿಯಾಗಿರುವ ಚಿಲುಮೆ ಸಂಸ್ಥೆ ತನ್ನ ಮೇಲಿನ ಆರೋಪದ ಹೊರತಾಗಿಯೂ ಮತ್ತೊಂದು ಟೆಂಡರ್ ಪಡೆಯಲು ಲಾಬಿ ನಡೆಸಿರುವುದು ಬೆಳಕಿಗೆ ಬಂದಿದೆ.ಬಿಬಿಎಂಪಿ ವತಿಯಿಂದ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಕಲ್ಯಾಣ ಸಮಿತಿ ವಿಭಾಗ ಈ ಕುರಿತು ಟೆಂಡರ್ ಅನ್ನು ಆಹ್ವಾನಿಸಿದೆ. ಚಿಲುಮೆ ಸಂಸ್ಥೆ ಟೆಂಡರ್ ಗೆ ಬಿಡ್ ಸಲ್ಲಿಸಿದ್ದು, ಗುತ್ತಿಗೆ ಪಡೆದುಕೊಳ್ಳಲು ಹರಸಾಹಸ ನಡೆಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರೂ ಸೇರಿದಂತೆ ಭಾರಿ ಪ್ರಭಾವ ಬಳಸಿ ಟೆಂಡರ್ ಗಿಟ್ಟಿಸುವ ಯತ್ನ […]

ಕುಟುಂಬಸ್ಥರಿಗೆ ಟಿಕೆಟ್ ಕೊಡಿಸಲು ಬಿಜೆಪಿ ಭಾರೀ ಲಾಬಿ..

ಬೆಂಗಳೂರು,ನ.24- ಕುಟುಂಬ ರಾಜಕಾರಣವನ್ನೇ ವಿರೋಧಿಸುತ್ತಲೇ ಕೇಂದ್ರ ಮತ್ತು ದೇಶದ ವಿವಿಧ ಕಡೆ ಅಧಿಕಾರಕ್ಕೆ ಬಂದಿರುವ ಬಿಜೆಪಿಯಲ್ಲಿ ತಮ್ಮ ಪುತ್ರರು ಹಾಗೂ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡಿಸಲು ಲಾಬಿ ಆರಂಭವಾಗಿದೆ. ಸರಿಸುಮಾರು ಎರಡು ಡಜನ್‍ಗೂ ಅಧಿಕ ಆಕಾಂಕ್ಷಿಗಳು ತಮ್ಮ ಪುತ್ರರು, ಪುತ್ರಿಯರು, ಸಹೋದರ, ತಾಯಿಂದಿರಿಗೆ ಟಿಕೆಟ್ ಕೊಡಿಸಿ ಕಣಕ್ಕಿಳಿಸಲು ಗಾಡ್‍ಫಾದರ್‍ಗಳ ಮೊರೆ ಹೋಗಿದ್ದಾರೆ. ಕುಟುಂಬ ರಾಜಕಾರಣದಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರಿ ಸಾರಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದರೂ ನಮಗೂ ಅದಕ್ಕೂ ಸಂಬಂಧವೇ […]