ಓಮಿಕ್ರಾನ್ ಏರಿಕೆ: ಕೆಲವೆಡೆ ರೈಲು, ವಿಮಾನ ಸಂಚಾರ ರದ್ದು, ಮತ್ತೆ ಲಾಕ್‍ಡೌನ್ ಭೀತಿ..!

ನವದೆಹಲಿ/ಕೋಲ್ಕತಾ/ಮುಂಬೈ,ಜ.2- ದೇಶ ದಲ್ಲಿ ದಿಢೀರನೆ ಓಮಿಕ್ರಾನ್ ರೂಪಾಂತರಿ ಮತ್ತು ಸಾಮಾನ್ಯ ಕೋವಿಡ್-19 ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗಿದ್ದು, ಹಲವು ರಾಜ್ಯಗಳಲ್ಲಿ ಲಾಕ್‍ಡೌನ್ ವಿಧಿಸುವ ಲಕ್ಷಣಗಳು ಗೋಚರಿಸಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿದೆ. ಏಳು ತಿಂಗಳ ಬಳಿಕ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 2000ರ ಗಡಿ ದಾಟಿದ್ದು, ಇದಾದ ಒಂದು ದಿನದ ನಂತರ ದೆಹಲಿ ಸಿಎಂ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ.  ದೆಲಿಯಲ್ಲಿ 2,716 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. 2021ರ ಮೇ […]