ಸಿಕಂದ್ರಬಾದ್‍ನಲ್ಲಿ ಧಗಧಗಿಸಿದ ಇ-ಬೈಕ್ ಶೋ ರೂಂ, 8 ಮಂದಿ ಸಾವು

ಸಿಕಂದ್ರಬಾದ್, ಸೆ.13- ತೆಲಂಗಾಣದ ಸಿಕಂದ್ರಬಾದ್‍ನಲ್ಲಿ ಇ-ಬೈಕ್ ಶೋ ರೂಂನಲ್ಲಿ ಬೆಂಕಿ ಅನಾವುತ ಸಂಭವಿಸಿದ್ದು, ಕನಿಷ್ಠ ಎಂಟು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಪಾಸ್‍ಪೋಟ್ ಕಚೇರಿ ಸಮೀಪ ಇರುವ ಇ-ಬೈಕ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ರಮೇಣ ಅಗ್ನಿಯ ಕೆನ್ನಾಲಿಗೆಗಳು ಶೋ ರೂಂ ಮೇಲಿನ ಮಹಡಿಯಲ್ಲಿರುವ ಲಾಡ್ಜ್ ಮತ್ತು ರೆಸ್ಟೋರೆಂಟ್‍ಗೂ ವ್ಯಾಪಿಸಿದೆ. ಹೋಟೆಲ್‍ನ ಸಿಬ್ಬಂದಿಗಳು ಮತ್ತು ಅತಿಥಿಗಳು ಬೆಂಕಿ ಮತ್ತು ಹೊಗೆಯನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. […]

ಲಾಡ್ಜ್ ಗ್ರಾಹಕರನ್ನು ದೋಚುತ್ತಿದ್ದ ಆರೋಪಿಗಳ ಸೆರೆ

ಮೈಸೂರು, ಜು.3- ಲಾಡ್ಜ್‍ನಲ್ಲಿ ಬರುವಂತಹ ಗ್ರಾಹಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ, ನಗದು ದೋಚುತ್ತಿದ್ದ ಇಬ್ಬರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಜು.19ರಂದು ನಗರದ ಲಕ್ಷ್ಮೀವಿಲಾಸ ರಸ್ತೆಯಲ್ಲಿರುವ ರಾಜ್ ಮಹಲ್ ಡಿಲೆಕ್ಸ್ ಲಾಡ್ಜ್ ನಲ್ಲಿ ಚಿನ್ನ, ಬೆಳ್ಳಿ, ಆಭರಣಗಳು ಹಾಗೂ ನಗದು ಹಣ ಕಳವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಅದರಂತೆ ಕಳೆದ ಜು. 26ರಂದು ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದು, ಅವರಿಂದ 30 ಲಕ್ಷ ರೂ. ಮೌಲ್ಯದ 621 ಗ್ರಾಂ ಚಿನ್ನಾಭರಣ, 350 ಗ್ರಾಂ […]