ಭಾರತದಲ್ಲಿ 3 ವರ್ಷಗಳಲ್ಲಿ 329 ಹುಲಿ ಸಾವು

ನವದೆಹಲಿ, ಜು.26 – ಬೇಟೆಗಾರರು, ನೈಸರ್ಗಿಕ ಮತ್ತು ಅಸ್ವಾಭಾವಿಕ ಕಾರಣಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ 329 ಹುಲಿಗಳು ಸಾವನ್ನಪ್ಪಿದೆ ಇದೇ ಅವಧಿಯಲ್ಲಿ 125 ಜನರು ಹುಲಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರಸರ್ಕಾರ ತಿಳಿಸಿದೆ. ಇದೇ ಅವಧಿಯಲ್ಲಿ 307 ಆನೆಗಳು ವಿದ್ಯುದಾಘಾತ, ರೈಲು ಅಪಘಾತ, ವಿಷ ಮತ್ತು ಬೇಟೆಯಿಂದ ಸಾವನ್ನಪ್ಪಿವೆ ಎಂದು ಸೋಮವಾರ ಲೋಕಸಭೆಯಲ್ಲಿ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅಂಕಿಅಂಶ ಮಂಡಿಸಿದ್ದಾರೆ. 2019 ರಲ್ಲಿ 96, 2020 ರಲ್ಲಿ 106 […]

ಹಣದ ಆಸೆಗೆ 6.62 ಲಕ್ಷ ಕಳೆದುಕೊಂಡ ವಿದ್ಯಾರ್ಥಿ..!

ತುಮಕೂರು,ಜು.20- ದಿನ ಬೆಳಗಾದರೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದಕ್ಕೊಂದು ಉದಾರಣೆ ಎಂದರೆ ಹಣದ ಆಸೆಗೆ ಇಲ್ಲೊಬ್ಬ ವಿದ್ಯಾರ್ಥಿ ಸುಮಾರು 6.62 ಲಕ್ಷ ರೂ. ಕಳೆದುಕೊಂಡಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಕಿಟ್ಟಗಳ್ಳಿಯ ವಿದ್ಯಾರ್ಥಿ ಭೀಮ್ ಸೇನ್ ಮೊಬೈಲ್‍ಗೆ ಪ್ರತಿದಿನ 7000 ಸಂಪಾದಿಸುವ ಕೆಲಸ ಖಾಲಿ ಇದೆ ಎಂಬ ಮೆಸೇಜ್ ಬಂದಿದೆ. ಹಣದ ಆಸೆಗೆ ವಿದ್ಯಾರ್ಥಿ ಲಿಂಕ್ ಕ್ಲಿಕ್ ಮಾಡಿದ್ದಾನೆ. […]