ಭದ್ರತಾ ಪಡೆಗಳ ಮುಖ್ಯಸ್ಥರಾಗಿ ಚೌವ್ಹಾಣ್ ಅಧಿಕಾರ ಸ್ವೀಕಾರ

ನವದೆಹಲಿ, ಸೆ.30- ಭದ್ರತಾ ಪಡೆಗಳ ಮುಖ್ಯಸ್ಥರಾಗಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌವ್ಹಾನ್ ಇಂದು ಅಧಿಕಾರವಹಿಸಿಕೊಂಡರು.ಸೇನಾ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಕೂಡ ಅವರು ಸೇವೆ ಸಲ್ಲಿಸಿದ್ದು, ಪ್ರಮುಖವಾಗಿ ಮೂರು ಪಡೆಗಳ ನಡುವೆ ಸಮನ್ವಯತೆ ಹಾಗೂ ಆಧುನೀಕರಣಕ್ಕೆ ಒತ್ತು ನೀಡುವ ನಿರೀಕ್ಷೆಯಿದೆ. ಬಿಪಿನ್ ರಾವತ್ ಅವರ ಅಕಾಲಿಕ ನಿಧನದ ನಂತರ ಖಾಲಿಯಾಗಿದ್ದ ಈ ಹುದ್ದೆಗೆ 9 ತಿಂಗಳ ನಂತರ ಹೊಸ ಸಾರಥಿ ಬಂದಿದ್ದಾರೆ.ಗೂರ್ಖಾ ರೈಫಲ್ಸ್ ಪಡೆಯಿಂದ ಸೇನೆಗೆ ಬಂದಿದ್ದ ಇವರು ಹಲವಾರು ಪ್ರಮುಖ ಸನ್ನಿವೇಶಗಳಲ್ಲಿ ಸಾಹಸ ಮೆರೆದಿದ್ದರು. ಕಳೆದ […]