ಅದೃಷ್ಟದ ಕಲ್ಲೆಂದು ನಂಬಿಸಿ ಸಾರ್ವಜನಿಕರಿಗೆ ವಂಚನೆ : ಇಬ್ಬರು ಸಿಸಿಬಿ ಬಲೆಗೆ

ಬೆಂಗಳೂರು,ಮಾ.17- ಸಾಲಿಗ್ರಾಮ ಎಂಬ ಕಲ್ಲನ್ನು ವಿಷ್ಣುರೂಪದ ಅದೃಷ್ಟದ ಕಲ್ಲೆಂದು ಸಾರ್ವಜನಿಕರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮನೋಜ್ (57) ಮತ್ತು ಆದಿತ್ಯಸಾಗರ್ ಜವಾಳ್‍ಕಾರ್ (37) ಬಂಧಿತ ಆರೋಪಿಗಳು. ಗುಜರಾತ್‍ನ ಗೋಮಾತಿ ನದಿಯಿಂದ ಸಾಲಿಗ್ರಾಮ ಕಲ್ಲುಗಳನ್ನು ತಂದಿರುವುದಾಗಿ, ಇವು ವಿಷ್ಣು ರೂಪದ ಕಲ್ಲುಗಳು, ಕೋಟ್ಯಂತರ ಬೆಲೆ ಬಾಳುತ್ತದೆ ಎಂದು ಜನರನ್ನು ನಂಬಿಸಿ ಸಾಲಿಗ್ರಾಮ ಕಲ್ಲುಗಳನ್ನು 2ಕೋಟಿಗೆ ಮಾರಾಟ ಮಾಡುವ ನೆಪದಲ್ಲಿ ಹಣ ಪಡೆದುಕೊಂಡು ವಂಚಿಸಲು ಯತ್ನಿಸುತ್ತಿದ್ದರು. ಚುನಾವಣಾ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ RSS ಮತ್ತಷ್ಟು […]