3 ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ : ಮದ್ದೂರಿನಲ್ಲಿ ಹೃದಯ ವಿದ್ರಾವಕ ಘಟನೆ

ಬೆಂಗಳೂರು,ಡಿ.2- ತನ್ನ ಮೂವರು ಪುಟ್ಟ ಪುಟ್ಟ ಮಕ್ಕಳನ್ನು ಕೊಂದು ನಂತರ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿದೆ. ಮದ್ದೂರಿನ ಹೊಳೆಬೀದಿ ನಿವಾಸಿ ಊಸನಾಕೌಸರ್(30), ಮಕ್ಕಳಾದ ಹ್ಯಾರೀಶ್ (7), ಆಲಿಸಾ (4) ಮತ್ತು ಫಾತಿಮಾ (2) ಮೃತಪಟ್ಟವರು. ಮೂಲತಃ ತುಮಕೂರಿನ ಊಸನಾ ಅವರು ಹತ್ತು ವರ್ಷದ ಹಿಂದೆ ಮದ್ದೂರಿನ ಹೊಳೆಬೀದಿ ನಿವಾಸಿ, ಕಾರು ಮೆಕ್ಯಾನಿಕ್ ಆಖಿಲ್ ಎಂಬಾತನನ್ನು ಮದುವೆಯಾಗಿದ್ದು, ನರ್ಸಿಂಗ್‍ಹೋಮ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು.ದಂಪತಿ ತನ್ನ ಮೂವರು ಮಕ್ಕಳೊಂದಿಗೆ ಹೊಳೆ […]