ಆಚಾರಿಯನ್ನು ಯಾಮಾರಿಸಿದ್ದ ವಂಚಕನ ಬಂಧನ

ಬೆಂಗಳೂರು, ಜ.18- ಒಡವೆ ಮಾಡುವ ಆಚಾರಿಯನ್ನು ಸಂಪರ್ಕಿಸಿ ತಾನು ಜ್ಯುವೆಲರಿ ಅಂಗಡಿ ತೆರೆಯುತ್ತಿರುವುದಾಗಿ ಹೇಳಿ ನೆಕ್ಲೆಸ್‍ಗಳನ್ನು ಮಾಡಿಸಿಕೊಂಡು ನಂತರ ಹಣ ಕೊಡದೆ ಆಭರಣದೊಂದಿಗೆ ಪರಾರಿಯಾಗಿದ್ದ ಆಂಧ್ರ ಪ್ರದೇಶ ಮೂಲದ ವಂಚಕನನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಮಾಗಡಿ ರಸ್ತೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಫರಾನ್ ಬಂಧಿತ ಆರೋಪಿ. ಈತನಿಂದ 5 ಲಕ್ಷ ರೂ. ಮೌಲ್ಯದ 116ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್‍ರೋಡ್‍ನಲ್ಲಿ ಜ್ಯುವೆಲರಿ ಶಾಪ್ ತೆರೆಯುವುದಾಗಿ ಹೇಳಿ ಆರೋಪಿ ಫರಾನ್ ಅಂಗಡಿಯೊಂದನ್ನು ಬಾಡಿಗೆಗೆ […]