ಮಾಘ ಹುಣ್ಣಿಮೆಯಂದು ಗಂಗಾ ಸ್ನಾನ ಮಾಡಿ ಪುನಿತರಾದ ಭಕ್ತ ಸಾಗರ

ವಾರಾಣಾಸಿ,ಫೆ.5- ಮಾಘ ಹುಣ್ಣಿಮೆಯ ಅಂಗವಾಗಿ ಇಂದು ಲಕ್ಷಾಂತರ ಮಂದಿ ಗಂಗಾ ನದಿಯಲ್ಲಿ ಮಿಂದು ಪವಿತ್ರ ಸ್ನಾನ ಮಾಡಿ ಪುನಿತರಾದರು. ದೇಶದ ನಾನಾ ಮೂಲೆಗಳ ಲಕ್ಷಾಂತರ ಭಕ್ತರು, ಸಾಧು,ಸಂತರುಗಳು ಉತ್ತರ ಪ್ರದೇಶದ ವಾರಾಣಾಸಿಯ ಪ್ರಯಾಗ ಘಾಟ್‍ಗೆ ಆಗಮಿಸಿ ಪವಿತ್ರ ಗಂಗೆಯಲ್ಲಿ ಮಿಂದು ತಮ್ಮ ಪಾಪ ಕರ್ಮಗಳನ್ನು ಕಳೆದುಕೊಂಡರು. ಮಾಘ ಹುಣ್ಣಿಮೆಯ ಸಂದರ್ಭದಲ್ಲಿ ಪವಿತ್ರ ಗಂಗಾ ಸ್ನಾನ ಮಾಡಲು ಆಗಮಿಸಿರುವ ಪ್ರವಾಸಿಗರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯ ಯೋಗಿನಾಥ್ ಅವರು ಟ್ವಿಟರ್‍ನಲ್ಲಿ ಶುಭ ಕೋರಿದ್ದಾರೆ. ಪವಿತ್ರ ಗಂಗಾಸ್ನಾನ ಮಾಡಿ ವಿಷ್ಣುವಿಗೆ ಪ್ರಾರ್ಥನೆ […]