ಮೇಕೆದಾಟು ಬಳಿಕ ಮಹದಾಯಿಗಾಗಿ ಹೋರಾಟ : ಸಿದ್ಧರಾಮಯ್ಯ

ಹುಬ್ಬಳ್ಳಿ, ಜ.24- ಅರ್ಧಕ್ಕೆ ನಿಂತಿರುವ ಮೇಕೆದಾಟು ಪಾದಯಾತ್ರೆ ಪುನರಾರಂಭವಾಗಲಿದ್ದು, ಬಳಿಕ ಮುಂದಿನ ದಿನಗಳಲ್ಲಿ ಮಹದಾಯಿ, ಕೃಷ್ಣ ನದಿಗಳ ಯೋಜನೆ ಪೂರ್ಣಗೊಳಿಸಲು ಹಾಗೂ ಕಲ್ಯಾಣ ಕರ್ನಾಟಕದ 371 ಜೆ ಅಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಹೋರಾಟ ನಡೆಸುವುದಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ತಮ್ಮ ಸ್ವಕ್ಷೇತ್ರ ಬಾದಾಮಿಗೆ ತೆರಳಲು ಆಗಮಿಸಿದ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಹದಾಯಿ ಪಾದಯಾತ್ರೆ ಬಗ್ಗೆ ಈಗಾಗಲೇ ಪಕ್ಷದಲ್ಲಿ ಚರ್ಚೆ ನಡೆದಿದೆ. ಕಾಂಗ್ರೆಸ್ಅ್ಧಿಧಿಕಾರದಲ್ಲಿದ್ದಾಗ ಆಗಿನ ವಿರೋಧ ಪಕ್ಷದ ನಾಯಕ ಬಿ.ಎಸ್‍.ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಹೋರಾಟ […]