ಲಾತೂರ್ ಜನರ ನಿದ್ದೆಗೆಡಿಸಿದೆ ನಿಗೂಢ ಶಬ್ದ

ಮುಂಬೈ,ಫೆ.16- ಮಹಾರಾಷ್ಟ್ರದ ಲಾತೂರ್‍ನಲ್ಲಿ ಕೇಳಿ ಬಂದ ನಿಗೂಢ ಶಬ್ದಗಳು ಅಲ್ಲಿನ ಜನರ ನಿದ್ದೆಗೆಡಿಸಿದೆ.ನಿನ್ನೆ ಲಾತೂರ್‍ನ ವಿವೇಕಾನಂದ ಚೌಕದ ಬಳಿ ನಿಗೂಢ ಶಬ್ದ ಕೇಳಿ ಬಂದಿತ್ತು. ಆದರೆ ಆ ಶಬ್ದ ಭೂಕಂಪನದ ಮುನ್ಸೂಚನೆ ಇರಬಹುದೆ ಎಂಬ ಅನುಮಾನ ಅಲ್ಲಿನ ಜನರನ್ನು ಕಾಡಿತ್ತು. ಆದರೆ, ನಿಗೂಢ ಶಬ್ದಕ್ಕೂ ಭೂಕಂಪನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಕಾರಿಗಳು ಸ್ಪಷ್ಟನೆ ನೀಡಿದ ನಂತರ ನಿಗೂಢ ಶಬ್ದ ಎಲ್ಲಿಂದ ಬಂತು ಎನ್ನುವುದು ಇನ್ನು ನಿಗೂಢವಾಗಿಯೇ ಉಳಿದಿದೆ.1993 ರಲ್ಲಿ ಲಾತೂರ್ ಜಿಲ್ಲೆಯ ಕಿಲಾರಿ ಗ್ರಾಮ ಮತ್ತು ನೆರೆಯ […]

ಅಜ್ಜಿ ಚಪ್ಪಲಿ ಕೊಡಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಮೊಮ್ಮಗ

ಔರಂಗಾಬಾದ್,ಫೆ.14- ಅಜ್ಜಿ ಹೊಸ ಚಪ್ಪಲಿ ಕೊಡಿಸಲಿಲ್ಲ ಎಂದು 10 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ 10 ವರ್ಷದ ಬಾಲಕ ತನ್ನ ಅಜ್ಜಿ ಹೊಸ ಪಾದರಕ್ಷೆಗಳನ್ನು ಖರೀದಿಸಲು ನಿರಾಕರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಕ್ಕದ ಹಳ್ಳಿಯ ದಂಪತಿ ಮಗು ತನ್ನ ಅಜ್ಜಿಯೊಂದಿಗೆ ವಾಸಿಸುತಿತ್ತು. ಹೊರಗಡೆ ಹೋಗಿದ್ದಾಗ ಮಗು ಹೊಸ ಜೋಡಿ ಚಪ್ಪಲಿಗಳನ್ನು ಕೇಳಿದನು ಆದರೆ ಅವನ ಬೇಡಿಕೆಗೆ ಅವನ ಅಜ್ಜಿ ಒಪ್ಪಲಿಲ್ಲ. ಇದರಿಂದ ಮನನೊಂದ ಮಗು ಮನೆಗೆ […]

ಮೀನುಗಾರಿಕಾ ದೋಣಿ ಮುಳುಗಡೆ, 15 ಜನರ ರಕ್ಷಣೆ

ಪಾಲ್ಘರ್, ಜ. 4- ಅರಬ್ಬಿ ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಮೀನುಗಾರಿಕಾ ದೋಣಿ ಮಗುಚಿ ಬಿದ್ದಿದ್ದು,ಅದೃಷ್ಠವಷಾತ್ ಅದರಲ್ಲಿದ್ದ ಎಲ್ಲಾ 15 ಜನರನ್ನು ರಕ್ಷಿಸಲಾಗಿದೆ. ಪಾಲ್ಘರ್ ಜಿಲ್ಲೆಯ ಕರಾವಳಿಯಲ್ಲಿ ಬೋಯಿಸರ್ ಮುರ್ಬೆ ಗ್ರಾಮದ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ಮುಖ್ಯಸ್ಥ ವಿವೇಕಾನಂದ ಕದಂ ತಿಳಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮುಗಿಯದ ಕಾಮಗಾರಿ, ಪಾದಚಾರಿಗಳಿಗೆ ಕಿರಿಕಿರಿ ಕರಾವಳಿಯಿಂದ 55 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕಾ ದೋಣಿ ಜಯ್ ಸಾಗರಿಕಾ ಬಂಡೆಗೆ ಅಪ್ಪಳಿಸಿ […]

ಸಂಘರ್ಷಕ್ಕಿಳಿಯದಂತೆ ಮರಾಠಿಗರು-ಕನ್ನಡಿಗರಲ್ಲಿ ಅಲೋಕ್‍ ಕುಮಾರ್ ಮನವಿ

ಬೆಳಗಾವಿ,ಡಿ.24- ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಪರಸ್ಪರ ಕೆಸರೆರಚಾಡದಂತೆ ಮರಾಠಿ ಮತ್ತು ಕನ್ನಡ ನಾಯಕರಿಗೆ ಎಡಿಜಿಪಿ ಅಲೋಕ್‍ಕುಮಾರ್ ಅವರು ಮನವಿ ಮಾಡಿದರು. ಇಲ್ಲಿನ ಟಿಳಕವಾಡಿ ಠಾಣೆಯಲ್ಲಿ ಸಂಧಾನ ಮತ್ತು ಶಾಂತಿ ಸಭೆ ನಡೆಸಿ ಮಾತನಾಡಿದ ಅವರು, ಕೇಂದ್ರದ ನಿರ್ದೇಶನದಂತೆ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಪರಸ್ಪರ ಸಂಘರ್ಷ ನಡೆಸಬಾರದು. ಕೆಸರೆರಚಾಟ ಮಾಡದಂತೆ ಮನವಿ ಮಾಡಿದರು. ಸುಪ್ರೀಂಕೋರ್ಟ್ ತೀರ್ಪನ್ನು ನಾವು ಆಲಿಸಿ ಅದರಂತೆ ನಡೆದುಕೊಳ್ಳಬೇಕಾಗಿರುವುದು ಸಾಂವಿಧಾನಿಕ ಧರ್ಮ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹೆಣಗಾಡುತ್ತಲೇ ಇರುತ್ತದೆ. ಬೆಳಗಾವಿ ನಗರ ಮತ್ತು […]

ಮಹಾಪುಂಡರಿಗೆ ಮತ್ತೊಮ್ಮೆ ವಾರ್ನ್ ಮಾಡಿದ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ,ಡಿ.18- ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಸಿದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರ ಪುಂಡಾಟಿಕೆಗೆ ಕಿಡಿಕಾರಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅವರನ್ನು ಯಾವ ರೀತಿ ಇಡಬೇಕೊ ಅದನ್ನು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಹುಬ್ಬಳ್ಳಿಯ ಆದರ್ಶ ನಗರದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಸಿದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ. ಅವರಿಗೆ ಸೌಹಾರ್ದಯುತವಾಗಿ ಇರಲು ಗೊತ್ತಿಲ್ಲ ಎಂದರು. ಮಹಾರಾಷ್ಟ್ರ- ಕರ್ನಾಟಕ ಮುಖ್ಯಮಂತ್ರಿಗಳ ಹಾಗೂ ಪ್ರಮುಖರ ಜೊತೆಗೆ […]

ಮಹಾರಾಷ್ಟ್ರ ಸಚಿವರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು,ಡಿ.5- ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ವಿವಾದ ತೀವ್ರ ಸಂಘರ್ಷ ಉಂಟು ಮಾಡುತ್ತಿರುವ ಹಿನ್ನಲೆಯಲ್ಲಿ ನಾಳೆ ಅಲ್ಲಿನ ಸಚಿವರ ಭೇಟಿಗೆ ಪ್ರತಿಬಂಧಕಾಜ್ಞೆ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನಾಳೆ ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ್ ಪಾಟೀಲ್, ಶಂಭುರಾಜ್ ದೇಸಾಯಿ ಅವರು ಬೆಳಗಾವಿಗೆ ಭೇಟಿ ಕೊಟ್ಟು ಎಂಇಎಸ್ ನಾಯಕರ ಜೊತೆ ಗಡಿವಿವಾದ ಕುರಿತು ಚರ್ಚೆ ನಡೆಸಲಿದ್ದಾರೆ. ಆದರೆ ಸಚಿವರ ಆಗಮನಕ್ಕೆ ಕನ್ನಡಪರ ಸಂಘಟನೆಗಳು ಹಾಗೂ ಸಾಹಿತಿಗಳು ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿರುವ ಕಾರಣ, ಭೇಟಿಗೆ ಅವಕಾಶ […]