ರಾಜ್ಯದೆಲ್ಲೆಡೆ ಸಡಗರ-ಸಂಭ್ರಮದ ಶಿವರಾತ್ರಿ

ಬೆಂಗಳೂರು, ಮಾ.1- ಯೋಗೀಶ್ವರನಾದ ಪರಶಿವನು ಶೀಘ್ರ ವರಪ್ರದಾಯಕ. ಏಕಬಿಲ್ವಂ ಶಿವಾರ್ಪಣಂ ಎಂದ ಮಾತ್ರಕ್ಕೆ ಆತ ಸಂತೃಪ್ತನಾಗುತ್ತಾನೆ. ಶಿವನ ಜನ್ಮದಿನವಾದ ಶಿವರಾತ್ರಿಯಂದು ಮನುಕುಲದಲ್ಲಿ ವಿಶೇಷ ಜಾಗೃತಿ, ತೇಜಸ್ಸು ಮೂಡುತ್ತದೆ. ಇದು ಶಿವ ಹಾಗೂ ಶಕ್ತಿಯ ಸಮಾಗಮದ ಫಲ. ಇಂದು ಮಹಾಶಿವರಾತ್ರಿ. ಶಿವ-ಪಾರ್ವತಿಯರ ಪರಿಣಯದ ಶುಭದಿನ. ಮಹಾ ಶಿವರಾತ್ರಿಯನ್ನು ಭಕ್ತಾದಿಗಳು ಭಕ್ತಿ-ಸಡಗರದಿಂದ ಆಚರಿಸುತ್ತಾರೆ.ಕೊರೊನಾ ಸೋಂಕಿನಿಂದ ಎರಡು ವರ್ಷದಿಂದ ಹಬ್ಬದ ಸಂಭ್ರಮವಿಲ್ಲದೆ ಮಂಕಾಗಿತ್ತು. ಕೊರೊನಾ ಆತಂಕ ದೂರವಾದ ಹಿನ್ನೆಲೆಯಲ್ಲಿ ಜನ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನಾಡಿನೆಲ್ಲೆಡೆ ಮಹಾ ಶಿವರಾತ್ರಿಯ ಸಂಭ್ರಮ. […]