ಕೋಮು ಗಲಭೆ ತಡೆದಿದ್ದಕ್ಕೆ ಗಾಂಧಿಜೀ ಹತ್ಯೆ ಮಾಡಲಾಯಿತು : ಸಿದ್ದರಾಮಯ್ಯ
ಬೆಂಗಳೂರು, ಜ.30- ದೇಶದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ದೇಶದಲ್ಲಿ ನಡೆಯುತ್ತಿದ್ದ ಕೋಮುಗಲಭೆಗಳನ್ನು ತಡೆಯಲು ಯತ್ನಿಸಿದ್ದಕ್ಕಾಗಿ ಮಹಾತ್ಮ ಗಾಂಧಿಜೀ ಅವರನ್ನು ಹತ್ಯೆ ಮಾಡಲಾಯಿತು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಾತ್ಮಗಾಂಧಿಜೀ ಅವರ 74 ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, 1946ರಲ್ಲಿ ಪಶ್ಚಿಮ ಬಂಗಾಳದ ನೌಕಾಲಿಯಲ್ಲಿ ದೊಡ್ಡ ಕೋಮು ಗಲಭೆಯಾಗಿತ್ತು. ಗಾಂಧಿಜೀ ಒಬ್ಬರೆ ಅಲ್ಲಿಗೆ ಕೋಲು ಹಿಡಿದುಕೊಂಡು ಹೋಗಿ ಮನೆ ಮನೆಗೆ ಭೇಟಿ ನೀಡಿ ಸಮಾದಾನ ಮಾಡಿ ಗಲಭೆ ತಡೆಯುತ್ತಾರೆ. ಮುಸಲ್ಮಾನರು […]