ಘಟಾನುಘಟಿ ನಾಯಕರನ್ನು ತಿರಸ್ಕರಿಸಿದ ಪಂಜಾಬ್ ಮತದಾರರು

ಬೆಂಗಳೂರು, ಮಾ.10- ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರುಗಳನ್ನು ಪಂಜಾಬ್ ಮತದಾರರು ತಿರಸ್ಕರಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಚರಣ್‍ಜಿತ್ ಸಿಂಗ್ ಚನ್ನಿ ಅವರು ಚಮ್ಕಾರ್ ಸಾಹೀಬ್ ಹಾಗೂ ಬಾದೂರು ಕ್ಷೇತ್ರಗಳಿಂದ ಸ್ರ್ಪಧಿಸಿದ್ದು, ಎರಡು ಕ್ಷೇತ್ರಗಳಲ್ಲೂ ಹೀನಾಯ ಸೋಲು ಕಂಡಿದ್ದಾರೆ. ಅದೇ ರೀತಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನವಜೋದ್‍ಸಿಂಗ್ ಸಿಧು ಅವರು ಅಮೃತ್‍ಸರ್ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ರ್ಪಧಿಸಿದ್ದು, ಅವರಿಗೂ ಮತದಾರರು ಮನೆಬಾಗಿಲು ತೋರಿಸಿದ್ದಾರೆ.ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದು, ಸಿಧು ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿದ […]