ಕೇಂದ್ರ ಬಜೆಟ್‌ನಲ್ಲಿ ಪೆನ್ನಾರ್-ಕಾವೇರಿ ಸೇರಿ 5 ಅಂತಾರಾಜ್ಯ ನದಿಗಳ ಜೋಡಣೆ ಘೋಷಣೆ

ನವದೆಹಲಿ,ಫೆ.1- ಮಹತ್ವದ ಬೆಳವಣಿಗೆಯೊಂದರಲ್ಲಿ ಐದು ಅಂತಾರಾಜ್ಯ ನದಿಗಳ ಜೋಡಣೆಯನ್ನು ಘೋಷಣೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇದಕ್ಕಾಗಿ ಕರಡು ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದೆ ಎಂದು ತಿಳಿಸಿದ್ದಾರೆ. ಸಂಸತ್‍ನಲ್ಲಿ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್ ಅವರು, ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ಪೆನ್ನಾರ್-ಕಾವೇರಿ, ಯಮುನಾ-ಗಂಗಾ ಸೇರಿದಂತೆ ಒಟ್ಟು ಐದು ನದಿಗಳ ಜೋಡಣೆಗೆ ಕರಡು ಯೋಜನೆ ಸಿದ್ಧಗೊಳಿಸಲಾಗಿದೆ. ಸಂಬಂಸಿದ ರಾಜ್ಯಗಳ ನಡುವೆ ಒಮ್ಮತ ಮೂಡಿದ ಬಳಿಕ ನದಿ ಜೋಡಣೆಯನ್ನು ಅನುಷ್ಠಾನಕ್ಕೆ ತರುವುದಾಗಿ ಅವರು ಘೋಷಿಸಿದ್ದಾರೆ. […]