ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ

ಕೊಪ್ಪಳ, ಡಿ.5- ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲಾಧಾರಿಗಳು ಮುಂಜಾನೆ ಹನುಮ ಮಾಲೆ ವಿಸರ್ಜಿಸಿದರು. ಹನುಮ ಮಾಲಾಧಾರಿಗಳು ರಾತ್ರಿಯಿಂದಲೇ ಅಂಜನಾದ್ರಿ ಬೆಟ್ಟ ಹತ್ತುವ ಮೂಲಕ ಮುಂಜಾನೆ ಅಂಜನಾದ್ರಿ ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದು ಮಾಲೆ ವಿಸರ್ಜಿಸಿ ವಿಶೇಷ ಪೂಜೆ ಸಲ್ಲಿಸಿದರು. ಐತಿಹಾಸಿಕ ಅಂಜನಾದ್ರಿಬೆಟ್ಟಕ್ಕೆ ಭಜರಂಗಿ ಜಪ ಮಾಡುತ್ತಾ ಭಜರಂಗಿ ಭಕ್ತರ ದಂಡೇ ಆಗಮಿಸಿ, ಅಂಜನಿ ಸುತನ ಸನ್ನಿಯಲ್ಲಿ ರಾಮನಾಮ ಜಪ್ತಿಸುತ್ತ ಬೆಟ್ಟ ಹತ್ತುತ್ತಿದುದ್ದು ಕಂಡು ಬಂತು. ಅಂಜನಾದ್ರಿಗೆ ಆಗಮಿಸುವ ಹನುಮ ಮಾಲಾಧಾರಿಗಳಿಗೆ ಬೆಟ್ಟದ ಬಲಭಾಗದಿಂದ […]