ಮಾಲ್ ಆಫ್ ಅಮೆರಿಕಾದಲ್ಲಿ ಗುಂಡಿನ ದಾಳಿ, ಯುವಕನ ಹತ್ಯೆ

ಬ್ಲೂಮಿಂಗ್ಟನ್,ಡಿ.24- ಕ್ರಿಸ್‍ಮಸ್‍ಗೂ ಮುನ್ನಾ ದಿನ ಅಮೆರಿಕಾದ ಪ್ರತಿಷ್ಠಿತ ಮಾಲ್‍ನಲ್ಲಿ ಬಂದೂಕು ಸದ್ದು ಮಾಡಿದ್ದು, ಯುವಕನೊಬ್ಬ ಹತ್ಯೆಯಾಗಿದ್ದಾನೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಮಾಲ್ ಆಫ್ ಅಮೆರಿಕಾದಲ್ಲಿ ಗುಂಡಿನ ಸದ್ದು ಕೇಳಿ ಬಂದಿತ್ತು. ಕ್ರಿಸ್‍ಮಸ್ ಹಬ್ಬಕ್ಕೆ ಶಾಪಿಂಗ್ ಮಾಡಲು ಆಗಮಿಸಿ ಗ್ರಾಹಕರು ಗುಂಡಿನ ಸದ್ದು ಕೇಳಿ ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು. ಸ್ಥಳಕ್ಕೆ ಆಗಮಿಸಿದ ಬ್ಲೂಮಿಂಗ್ಟನ್ ಪೊಲೀಸರು ಮಾಲ್ ಅನ್ನು ಸುತ್ತುವರಿದ್ದರು. ತುರ್ತು ವೈದ್ಯಕೀಯ ನೆರವು ಹಾಗೂ ಅಗ್ನಿ ಶಾಮಕ ದಳ ಧಾವಿಸಿತ್ತು. ಹೆಚ್ಚಿನ ಅಪಾಯವನ್ನು ತಪ್ಪಿಸಲು ಕೆಲ ಕಾಲ ಮಾಲ್ ಅನ್ನು […]