ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಒಡೆದು ಹಾಕಿದ ಪುಂಡ

ಬೆಂಗಳೂರು,ಫೆ.5- ಪುಂಡನೊಬ್ಬ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದು ದಾಂಧಲೆ ನಡೆಸಿರುವ ಘಟನೆ ಮಲ್ಲೇಶ್ವರಂ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಮಲ್ಲೇಶ್ವರದ 13ನೇ ಕ್ರಾಸ್, 2ನೇ ಮೇನ್‍ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಮೂರು ಕಾರುಗಳ ಮೇಲೆ ದಾಳಿ ನಡೆಸಿದ ಪುಂಡನೊಬ್ಬ ದೊಣ್ಣೆಯಿಂದ ಗಾಜುಗಳನ್ನು ಪುಡಿ ಪುಡಿ ಮಾಡಿ ಪರಾರಿ ಯಾಗಿದ್ದಾನೆ. ಬೆಳಗ್ಗೆ ಕಾರಿನ ಮಾಲೀಕರು ಹಾಗೂ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುತೂಹಲ ಕೆರಳಿಸಿದ ಬೊಮ್ಮಾಯಿ ಹಾಗೂ ಬಿಎಸ್‌ವೈ ದೆಹಲಿ ಪ್ರವಾಸ ಸುದ್ದಿ […]

ಕಡಲೆಕಾಯಿ ಪರಿಷೆಯಲ್ಲಿ ಬಡವರ ಬಾದಾಮಿ ಸವಿದ ಬೆಂಗಳೂರಿಗರು

ಬೆಂಗಳೂರು, ನ.13- ಮಲ್ಲೇಶ್ವರಂನ ಕಾಡುಮಲ್ಲೇಶ್ವರ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಾನದಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆಗೆ ರಜಾದಿನವಾದ ಇಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಚಳಿಗೆ ಬಡವರ ಬಾದಾಮಿ ಸವಿದು ಸಂಭ್ರಮಿಸಿದರು. ಬಸವನಗುಡಿಯ ಮಾದರಿಯಲ್ಲೇ ಇಲ್ಲೂ ಕೂಡ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ತಮಿಳು ನಾಡು, ಆಂಧ್ರ ಪ್ರದೇಶದಿಂದ ಈ ಬಾರಿ ರೈತರು ಕಡಲೆಕಾಯಿ ಮಾರಾಟಕ್ಕೆ ಬಂದಿದ್ದು, ಹಸಿ, ಒಣ ಹಾಗೂ ಉರಿದ ಕಡಲೆಕಾಯಿ ಮಾರಾಟ ಜೋರಾಗಿತ್ತು. ಜತೆಗೆ ಮಕ್ಕಳ ಆಟಿಕೆ, […]

ಮಲ್ಲೇಶ್ವರಂ ಶಾಲಾ ಮಾದರಿ ಇಡೀ ರಾಜ್ಯಕ್ಕೆ ವಿಸ್ತರಣೆ : ಸಿಎಂ

ಬೆಂಗಳೂರು,ಅ.29-ತಂತ್ರಜ್ಞಾನಾಧಾರಿತ ಆಧುನಿಕ ಕಲಿಕೆ ಮತ್ತು ಸಾಂಪ್ರದಾಯಿಕ ಬೋಧನೆ ಎರಡನ್ನೂ ಹದವಾಗಿ ಸೇರಿಸಿ ರೂಪಿಸಿರುವ ಮಲ್ಲೇಶ್ವರಂ ಸ್ಕೂಲ್ ಮಾಡೆಲ್ ಹೈಬ್ರಿಡ್ ವ್ಯವಸ್ಥೆಯನ್ನು ರಾಜ್ಯಾದ್ಯಂತ ಇರುವ ಸರ್ಕಾರಿ (ಪಬ್ಲಿಕ್) ಶಾಲೆಗಳಲ್ಲಿ ಅಳವಡಿಸಿ ಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪುನೀತ್ ಉಪಗ್ರಹದ ವರ್ಕ್ ಸ್ಟೇಶನ್, ಮಾನಿಟರಿಂಗ್ ವ್ಯವಸ್ಥೆ, ಮಿನಿ ವಿಜ್ಞಾನ ಸಂಪನ್ಮೂಲ ಕೇಂದ್ರಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲ ಮಕ್ಕಳನ್ನೂ ತಮ್ಮ ಮಕ್ಕಳೆಂದು ಭಾವಿಸಿ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುತ್ತಿರುವ […]

ಮಲ್ಲೇಶ್ವರಂನಲ್ಲಿ ಗಂಧರ್ವಲೋಕ ಸೃಷ್ಟಿ : ನಡುರಾತ್ರಿ ಸಿಎಂ ಧ್ವಜಾರೋಹಣ

ಬೆಂಗಳೂರು, ಆ.15- ವೇದಿಕೆಯ ಮೇಲೆಲ್ಲ ತಿರಂಗದ ಝಗಮಗ ಬಣ್ಣಗಳ ಬಳುಕು, ಸಭಾಂಗಣದಲ್ಲಿ ನೆರೆದಿದ್ದವರ ಕೈಯಲ್ಲಿ ಅರಳಿದ್ದ ರಾಷ್ಟ್ರಧ್ವಜಗಳು, ಶಾಸ್ತ್ರೀಯ ನೃತ್ಯ ಮತ್ತು ಸಂಗೀತಗಳ ಹದವಾದ ಸಮ್ಮಿಲನದಲ್ಲಿ ತಾಯಿ ಭಾರತಾಂಬೆಯ ಸ್ತುತಿ, ಬಳಿಕ ಸಮಕಾಲೀನ ಚಿತ್ರಗೀತೆಗಳ ಮೂಲಕ ಜನರಲ್ಲಿ ಉತ್ಸಾಹದ ಅಲೆ ಎಬ್ಬಿಸಿದ ಹೆಸರಾಂತ ಗಾಯಕಿ ಮಂಗ್ಲಿ (ಸತ್ಯವತಿ) ಮತ್ತು ಅವರ ತಂಗಿ ಇಂದಿರಾವತಿ, ಇವೆಲ್ಲಕ್ಕೆ ಕಳಶವಿಟ್ಟಂತೆ ನಟ್ಟ ನಡುರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಧ್ವಜಾರೋಹಣ ಮಾಡಿದರು. ಇವು ಡಾ.ಸಿ ಎನ್ ಅಶ್ವತ್ಥ […]