ಬಾಡಿಗೆ ಮನೆ ಕೇಳುವ ನೆಪದಲ್ಲಿ ಆಭರಣ ದೋಚಿದ್ದವನ ಸೆರೆ

ಬೆಂಗಳೂರು,ಫೆ.23- ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದು ಮಾಲೀಕರು ಮನೆ ತೋರಿಸಲು ಒಳಗೆ ಹೋಗುತ್ತಿದ್ದಂತೆ ರೂಮ್ ಚಿಲಕ ಹಾಕಿ ಅವರ ಮೈಮೇಲಿದ್ದ ಆಭರಣಗಳನ್ನು ಕಿತ್ತುಒಂಡು ಪರಾರಿಯಾಗಿದ್ದ ಆರೋಪಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ತಮಿಳುನಾಡಿನ ಕಿರಣ್‍ಕುಮಾರ್(36) ಬಂಧಿತ ಆರೋಪಿ. ನಗರದ ಬಾಲಾಜಿಲೇಔಟ್‍ನಲ್ಲಿ ವಾಸವಾಗಿದ್ದ ಕಿರಣ್‍ಕುಮಾರ್ ವಿರುದ್ಧ ಈ ಹಿಂದೆ ರಾಜಗೋಪಾಲನಗರ ಹಾಗೂ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿ ರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಜ್ಞಾನಭಾರತಿಯ ಸರ್‍ಎಂವಿ ಲೇಔಟ್‍ನಲ್ಲಿ ಮನೆ ಖಾಲಿಯಿದೆ ಎಂಬ ಬೋರ್ಡ್ ಹಾಕಿದ್ದನ್ನು […]