ಭಯೋತ್ಪಾದಕ ದಾಳಿಯ ಹುಸಿ ಕರೆ ಮಾಡಿದ್ದವನ ಬಂಧನ

ಭೂಪಾಲ್,ಜ.10- ಮುಂಬೈನ ವಿವಿಧೆಡೆ ಭಯೋತ್ಪಾದಕ ದಾಳಿಗಳು ನಡೆಯಲಿದೆ ಎಂದು ಮುಂಬೈ ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಜಿತೇಶ್ ಠಾಕೂರ್ ಹುಸಿ ಕರೆ ಮಾಡಿದ ವ್ಯಕ್ತಿ. ನಿರುದ್ಯೋಗಿ ಹಾಗೂ ಮದ್ಯವ್ಯಸನಿಯಾಗಿರುವ ಈತ ಕಳೆದ ಜ.6ರಂದು ಮುಂಬೈ ಪೊಲೀಸ್ ಕಂಟ್ರೋಲ್‍ರೂಮ್‍ಗೆ ಕರೆ ಮಾಡಿ, ತಾನು ಸೈನ್ಯದಿಂದ ಕರೆ ಮಾಡುತ್ತಿದ್ದು, ಮುಂಬೈನಲ್ಲಿ ನ್ಯೂಕ್ಲಿಯಾರ್ ದಾಳಿ ನಡೆಯುವ ಸಾಧ್ಯತೆ ಇದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(ಸಿಎಸ್‍ಎಂಟಿ), ಕುರ್ಲಾ ರೈಲ್ವೆ ನಿಲ್ದಾಣ, ಬಾಲಿವುಡ್ ನಟ ಶಾರುಖ್ ಖಾನ್ ಬಂಗಲೆ ಹಾಗೂ ಕರಘರ್‍ನ […]