ಮಂಗಳೂರು ರೈಲಿನಲ್ಲಿ ಸಾಗಿಸುತ್ತಿದ್ದ 1.4 ಕೋಟಿ ನಗದು, 800 ಗ್ರಾಂ ಚಿನ್ನ ವಶ

ಮಂಗಳೂರು, ಜ.24- ಮುಂಬೈ ಎಲ್ಟಿಟಿ-ಎರ್ನಾಕುಲಂ ದುರಂತೋ ರೈಲಿನಲ್ಲಿ ಸೂಕ್ತ ದಾಖಲೆಗಳಿಲ್ಲದೆ 1.48 ಕೋಟಿ ರೂಪಾಯಿ ನಗದು ಮತ್ತು 800 ಗ್ರಾಂ ಚಿನ್ನಾಭರಣವನ್ನು ಸಾಗಿಸುತ್ತಿದ್ದ ಪ್ರಯಾಣಿಕನನ್ನು ಮಂಗಳೂರಿನಲ್ಲಿ ರೈಲ್ವೆ ಪೆÇಲೀಸರು ಬಂಸಿದ್ದಾರೆ. ರಾಜಸ್ಥಾನದ ಉದಯಪುರ ಮೂಲದ ಮಹೇಂದ್ರ ಸಿಂಗ್ ರಾವ್ (33)ನನ್ನು ಬಂಧಿತನಾಗಿದ್ದು, ಈತನನ್ನು ಮಂಗಳೂರು ಸೆಂಟ್ರಲ್‍ನಲ್ಲಿರುವ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಆರ್‍ಪಿಎಫ್ ಪ್ರಕಟಣೆ ತಿಳಿಸಿದೆ. ಸಿಆರ್‍ಪಿಸಿ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರೈಲ್ವೆ ಪೊಲೀಸರು ಆತನ ಬಂಧನವನ್ನು ದಾಖಲಿಸಿದ್ದಾರೆ. ರೈಲ್ವೆ ಪೊಲೀಸ್ ಸಿಬ್ಬಂದಿ […]