ಹಫ್ತಾ ಕೇಳಿ ಲಾಂಗ್ ಬೀಸಿದ್ದ ಪುಂಡ ಅಂದರ್

ಬೆಂಗಳೂರು, ಡಿ.18- ಹಪ್ತಾ ಕೊಡುವಂತೆ ಲಾಂಗ್ ಬೀಸಿ ಮೀನಿನ ವ್ಯಾಪಾರಿಯನ್ನು ಬೆದರಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುದೇಶ್ ಬಂಧಿತ ಆರೋಪಿ. ಬಾಣಸವಾಡಿಯ ಜೈಭಾರತ್ ನಗರದಲ್ಲಿ ಮೀನಿನ ಅಂಗಡಿ ಇಟ್ಟುಕೊಂಡಿರುವ ಮನೋಜ್ ವ್ಯಾಪಾರ ಮಾಡುತ್ತಿದ್ದಾಗ ಅಲ್ಲಿಗೆ ನಿನ್ನೆ ಸಂಜೆ ಬಂದಿದ್ದ ಸುದೇಶ್ , `ಎಲ್ಲಿಂದಲೋ ಬಂದು ಇಲ್ಲಿ ವ್ಯಾಪಾರ ಮಾಡುತ್ತಿದ್ದೀಯ ಮಗನೇ, ನನಗೆ ದುಡ್ಡು ಕೊಡದಿದ್ದರೆ ಸರಿಯಿರಲ್ಲ’ ಎಂದು ಲಾಂಗ್‍ನಿಂದ ಆತನ ಮೇಲೆ ಎರಗಿ ಬೆದರಿಸಿದ್ದಾನೆ. ಆತ ನನ್ನ ಬಳಿ ಹಣವಿಲ್ಲ ಎಂದು ಹೇಳಿದರೂ […]