ಮಂಡೋಲಿ ಜೈಲಿನ ಐವರು ಅಧಿಕಾರಿಗಳ ಅಮಾನತು

ನವದೆಹಲಿ, ಜ.6-ಮಂಡೋಲಿ ಜೈಲಿನಲ್ಲಿ ಮೊಬೈಲ್ ಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ದೆಹಲಿಯ ಕಾರಾಗೃಹ ಇಲಾಖೆ ಮೂವರು ಅಧಿಕಾರಿಗಳು ಇಬ್ಬರು ಸಿಬ್ಭಂದಿಯನ್ನು ಅಮಾನತುಗೊಳಿಸಲಾಗಿದೆ. ಇತ್ತೀಚೆಗೆ ಪೊಲೀಸರ ದಾಳಿವೇಲೆ ಮಂಡೋಲಿ ಜೈಲಿನಲ್ಲಿ ಮೊಬೈಲ್ ಫೋನ್‍ಗಳು ಹಾಗು ಇತರೆ ವಸ್ತುಗಲನ್ನು ವಶಪಡಿಸಿಕೊಳ್ಳಲಾಗಿತ್ತು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಉಪ ಅೀಧಿಕ್ಷಕರಾದ ಪ್ರದೀಪ್ ಶರ್ಮಾ ಮತ್ತು ಧರ್ಮೇಂದರ್ ಮೌರ್ಯ, ಸಹಾಯಕ ಸೂಪರಿಂಟೆಂಡೆಂಟ್ ಸನ್ನಿ ಚಂದ್ರ, ಹೆಡ್ ವಾರ್ಡರ್ ಲೋಕೇಶ್ ಧಾಮ ಮತ್ತು ವಾರ್ಡರ್ ಹಂಸರಾಜ್ ಮೀನಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. […]