ಮುಂದುವರೆದ ಮಳೆಯ ಅಬ್ಬರ ಜನಜೀವನ ತತ್ತರ..

ಬೆಂಗಳೂರು,ಡಿ.12- ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಬೀಳುತ್ತಿರುವ ಜಿಟಿಜಿಟಿ ಮಳೆ ಇಂದು ಕೂಡ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಆಗಾಗ್ಗೆ ತುಂತುರು ಇಲ್ಲವೆ ಹಗುರ ಮಳೆಯಾಗುತ್ತಿದೆ. ಅಲ್ಲದೆ, ತಂಪಾದ ಮೇಲ್ಮೈ ಗಾಳಿ ಬೀಸುವುದರಿಂದ ಉಂಟಾಗುವ ಮೈಕೊರೆಯುವ ಚಳಿಗೆ ಜನರು ತತ್ತರಿಸುತ್ತಿದ್ದಾರೆ.ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವವರು, ರೈನ್ಕೋಟ್, ಜರ್ಕಿನ್, ಕೊಡೆಗಳನ್ನು ಆಶ್ರಯಿಸಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಮಳೆ ನಿಂತು ಬಿಸಿಲು ಬಂದರೆ ಸಾಕು ಎಂಬ ಮನಸ್ಥಿತಿಗೆ ಬಹುತೇಕ ಜನರು ಬಂದಿದ್ದಾರೆ. ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ರಾಗಿ, ಭತ್ತ, ಮೆಕ್ಕೆಜೋಳ, ತೊಗರಿ, […]

ಮಾಂಡೌಸ್ ಚಂಡಮಾರುತಕ್ಕೆ ತಮಿಳುನಾಡು ತತ್ತರ

ಚೆನ್ನೈ, ಡಿ.10- ಮಾಂಡೌಸ್ ಚಂಡಮಾರುತಕ್ಕೆ ತಮಿಳುನಾಡು ತತ್ತರಿಸಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಂಗಲುಪಟ್ಟು, ಕಾಂಚೀಪುರಂ, ತಿರುವಲ್ಲೂರು, ವಿಲ್ಲುಪುರಂ, ಕಡಲೂರು ಸೇರಿದಂತೆ 15 ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಿನ್ನೆ ಸಂಜೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಚೆನ್ನೈನಿಂದ ಹೊರಡುವ ಹಲವಾರು ವಿಮಾನಗಳ ಸಂಚಾರ ಕೂಡ ರದ್ದುಪಡಿಸಲಾಗಿದೆ. ಮಹಾಬಲಿಪುರಂನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ವಿದ್ಯುತ್ ಕಂಬಗಳು, ಭಾರೀ ಗಾತ್ರದ ಮರಗಳು ಧರೆಗುರುಳಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಹಾಬಲಿಪುರಂನ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಹಲವಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಪುದುಚೇರಿಯಲ್ಲಿ […]

ಚಂಡಮಾರುತ : ತಮಿಳುನಾಡು ಪುದುಚರಿ ಕರಾವಳಿಯಲ್ಲಿ ಭಾರಿ ಕಟ್ಟೆಚ್ಚರ

ಚೆನ್ನೈ, ಡಿ. 9 – ಮಾಂಡೌಸ್ ಚಂಡಮಾರುತ ತಮಿಳುನಾಡು ಕರಾವಳಿ ಸಮೀಪಿಸುತ್ತಿದೆ ಎಂದು ಪ್ರಾದೇಶಿಕ ಹವಾಮಾನ ಕಚೇರಿ ತಿಳಿಸಿದೆ. ಇದರಿಂದ ತಮಿಳುನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಪೂರ್ವ ಆಗ್ನೇಯಕ್ಕೆ 270 ಕಿಮೀ ದೂರದಲ್ಲಿ ಮಂಡೌಸ್ ಚಂಡಮಾರುತ ಇದೆ ಎಂದು ಹೇಳಿದೆ. ಇಂದು ಮಾಮಲ್ಲಪುರಂ ಬಳಿ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ ಮುಂದಿನ ಕೆಲವು ಗಂಟೆಗಳಲ್ಲಿ ಇದು ಚಂಡಮಾರುತವಾಗಿ ದುರ್ಬಲಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರೀ ಮಳೆ ಮತ್ತು ಗಾಳಿಯ ಎಚ್ಚರಿಕೆಯ ದೃಷ್ಟಿಯಿಂದ ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು […]