ಗಣರಾಜ್ಯೋತ್ಸವಕ್ಕೆ ಅಭೂತಪೂರ್ವ ಪೊಲೀಸ್ ಪಹರೆ

ಬೆಂಗಳೂರು,ಜ.24- ಈ ಬಾರಿಯ ಗಣರಾಜ್ಯೋತ್ಸವಕ್ಕೆ ಹಿಂದೆಂದೂ ಕಾಣದಂತಹ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯಕಟ್ಟಿನ ಪ್ರದೇಶಗಳ ಮೇಲೆ ಪೊಲೀಸರು ಹದ್ದಿನಕಣ್ಣಿಟ್ಟಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ಕಲ್ಪಿಸಿಕೊಡುವುದಿಲ್ಲ ಎಂದರು. 12 ಡಿಸಿಪಿಗಳು, 22 ಎಸಿಪಿಗಳು, 65 ಪೊಲೀಸ್ ಇನ್ಸ್‍ಪೆಕ್ಟರ್‍ಗಳು, 101 ಪಿಎಸ್‍ಐಗಳು, 46 ಮಹಿಳಾ ಪಿಎಸ್‍ಐಗಳು, 194 ಎಎಸ್‍ಐಗಳು, 1005 ಕಾನ್ಸ್‍ಟೆಬಲ್‍ಗಳು, 77 ಮಹಿಳಾ ಸಿಬ್ಬಂದಿಗಳು, […]