ಮಂಗಳೂರು ಆಟೋ ಸ್ಪೋಟಕ್ಕೆ ತುಮಕೂರು ರೈಲ್ವೆ ಸಿಬ್ಬಂದಿ ಹೆಸರು ಲಿಂಕ್..!

ತುಮಕೂರು,ನ.20- ಮಂಗಳೂರಿನಲ್ಲಿ ಸಂಭವಿಸಿದ ಆಟೋ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ರೈಲ್ವೆ ಸಿಬ್ಬಂದಿಯೊಬ್ಬರ ಹೆಸರು ತಳಕು ಹಾಕಿಕೊಂಡಿದ್ದು, ಸ್ಪೋಟ ಸಂಭವಿಸಿರುವ ಸ್ಥಳದಲ್ಲಿ ದೊರೆತಿರುವ ಗುರುತಿನಪತ್ರ ತುಮಕೂರಿನ ರೈಲ್ವೆ ಸಿಬ್ಬಂದಿಯದು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಮೂಲತಃ ಹುಬ್ಬಳ್ಳಿ ಮೂಲಕ ಪ್ರೇಮರಾಜ್ ಹುಟಗಿ, ತುಮಕೂರಿನ ರೈಲ್ವೆ ವಿಭಾಗದಲ್ಲಿ ಟ್ರ್ಯಾಕ್‍ಮೆನ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಆಧಾರ್‍ಕಾರ್ಡ್ ಕಳೆದುಕೊಂಡಿದ್ದ. ಮಂಗಳೂರಿನಲ್ಲಿ ನಡೆದಿರುವ ಆಟೋದಲ್ಲಿ ಸ್ಪೋಟ ಆದಾಗ ಅದರಲ್ಲಿ ಗುರುತಿನ ಪತ್ರವೊಂದು ದೊರೆಕಿದೆ. ಮಂಗಳೂರಿನ […]
ಮಂಗಳೂರಿನ ಆಟೋ ಸ್ಪೋಟ ಪ್ರಕರಣ ಎನ್‍ಐಎಗೆ ಹಸ್ತಾಂತರ

ಬೆಂಗಳೂರು,ನ.20-ಮಂಗಳೂರಿನ ಕಂಕನಾಡಿ ಬಳಿ ಆಟೋದಲ್ಲಿ ಕುಕ್ಕರ್ ಸ್ಪೋಟ ಗೊಂಡ ಪ್ರಕರಣವನ್ನು ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಗೆ ಹಸ್ತಾಂತರಿಸಲಿದೆ. ಇದು ಆಕಸ್ಮಿಕವಾಗಿ ಕುಕ್ಕರ್ ಸ್ಪೋಟ ಗೊಂಡ ಪ್ರಕರಣವಲ್ಲ. ಭಯೋತ್ಪಾದನಾ ಕೃತ್ಯ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್ ಅವರು ಟ್ವೀಟ್ ಮಾಡಿರುವುದರಿಂದ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಮೂಲಗಳ ಪ್ರಕಾರ ಕೊಯಮತ್ತೂರಿನಲ್ಲಿ ನಡೆಸಿದ ಕೃತ್ಯ ನಡೆಸಿದ ಭಯೋತ್ಪಾದಕರೇ ಮಂಗಳೂರಿನಲ್ಲೂ ನಡೆಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಭಯೋತ್ಪಾದನಾ ಕೃತ್ಯ ಕಂಡುಬಂದಿರುವುದರಿಂದ ತತಕ್ಷಣವೇ ಸರ್ಕಾರ ಎನ್‍ಐಎ ಹಸ್ತಾಂತರ ಮಾಡಲಿದೆ ಎಂದು […]