4 ಎಕರೆಯಲ್ಲಿ ಬೆಳೆದಿದ್ದ ಮಾವಿನ ಮರ ನಾಶ ಮಾಡಿದ ನಾಲ್ವರ ವಿರುದ್ಧ ಕೇಸ್

ಕುಣಿಗಲ್,ಡಿ.19- ತಾಲೂಕಿನ ಹುತ್ರಿದುರ್ಗ ಹೋಬಳಿಯ ಕಡೆಸಿಂಗನಹಳ್ಳಿಯಲ್ಲಿ ಡಾ.ಉಮಾಲತಾ ಎಂಬುವರಿಗೆ ಸೇರಿದ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮಾವಿನ ಮರಗಳನ್ನು ದುಷ್ಕರ್ಮಿಗಳು ನಾಶ ಮಾಡಿರುವ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಗಡಿ ತಾಲೂಕಿನ ಕಲ್ಯಾ ನಿವಾಸಿಯಾಗಿದ್ದು, ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಾಸವಿರುವ ಡಾ.ಉಮಾಲತಾ ಅವರು ಕಡೆಸಿಂಗನಹಳ್ಳಿ ಗ್ರಾಮದ ಸರ್ವೇ ನಂಬರ್ 303ರಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದರು. ಉಮಾಲತಾ ಅವರ ಜಮೀನಿನ ಬಗ್ಗೆ ಹುಚ್ಚೇಗೌಡ, ರಾಮಣ್ಣ, ಪುನೀತ್ ಹಾಗೂ ನಂಜೇಗೌಡ ಎಂಬುವರು ತಗಾದೆ ತೆಗೆದು ನಿಮ್ಮ […]