ಮಣಿಪುರ ವಿಧಾನಸಭೆ ಮೊದಲ ಹಂತದ ಚುನಾವಣೆಯಲ್ಲಿ ಹಿಂಸಾಚಾರ

ಇಂಫಾಲ, ಫೆ.28- ಮಣಿಪುರ ವಿಧಾನಸಭಾಗೆ ಸೋಮವಾರ ನಡೆದ ಮೊದಲ ಹಂತದ ಮತದಾನದಲ್ಲಿ ಹಿಂಸಾಚಾರ ನಡೆದಿದೆ. ಮೊದಲ ಹಂತದ ಮತದಾನದಲ್ಲಿ 38 ವಿಧಾನಸಭಾ ಕ್ಷೇತ್ರಗಳಿಂದ 12.09 ಲಕ್ಷ ಮತದಾರರಿದ್ದು, ಬೆಳಗ್ಗೆ 12 ಗಂಟೆಯ ವೇಳೆಗೆ ಶೇ.35ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಬಿಗಿ ಭದ್ರತೆ ಮತ್ತು ಕೋವಿಡ್ ನಿಯಮಾವಳಿಗಳ ಕಟ್ಟುನಿಟ್ಟಾದ ಅನುಸರಣೆಯ ನಡುವೆ ಐದು ಜಿಲ್ಲೆಗಳ 1,721 ಮತಗಟ್ಟೆಗಳಲ್ಲಿ ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. 5 ಮಹಿಳೆಯರು ಸೇರಿದಂತೆ ಒಟ್ಟು 173 ಅಭ್ಯರ್ಥಿಗಳು ಕಣದಲ್ಲಿದ್ದಾರೆ. […]