ವಲಸೆ ಕಾರ್ಮಿಕರಲ್ಲಿ ಭಯ ಹುಟ್ಟಿಸಿದ್ದ ಯುಟ್ಯೂಬರ್ ಶರಣಾಗತಿ

ಪಾಟ್ನಾ,ಮಾ.18- ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗುತ್ತಿದೆ ಎಂದು ಬಿಂಬಿಸುವ ಸುಳ್ಳು ಮಾಹಿತಿಯನ್ನು ನಕಲಿ ವಿಡಿಯೋಗಳ ಮೂಲಕ ಹರಡಿ ಭಯದ ವಾತಾವರಣ ಸೃಷ್ಟಿಸಿದ್ದ ಯು ಟ್ಯೂಬರ್ ಇಂದು ಬೆಳಗ್ಗೆ ಬಿಹಾರದ ಪೊಲೀಸರ ಮುಂದೆ ಶರಣಾಗಿದ್ದಾನೆ. ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ದಕ್ಷಿಣ ರಾಜ್ಯಗಳನ್ನು ಬಿಟ್ಟು ತೊಲಗುವಂತೆ ಆಕ್ರೋಶ ವ್ಯಕ್ತ ಪಡಿಸಲಾಗುತ್ತಿದೆ ಎಂದು ವಿಡಿಯೋ ಮೂಲಕ ಸುಳ್ಳು ಸುದ್ದಿ ಬೀತ್ತರಿಸಿದ ಪ್ರಕರಣಕ್ಕೆ ಸಂಬಂಸಿದಂತೆ ಮಾರ್ಚ್ 6ರಂದು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. […]