ಉಕ್ರೇನ್‍ನಿಂದ ಸುರಕ್ಷಿತವಾಗಿ ತವರು ತಲುಪಿದ ಸಾಗರದ ಮನಿಷಾ

ಸಾಗರ,ಮಾ.3-ರಷ್ಯಾ-ಉಕ್ರೇನ್ ನಡುವೆ ಮಿಲಿಟರಿ ಸಂಘರ್ಷ ನಡೆಯುತ್ತಿದ್ದು, ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ಕರ್ನಾಟಕದ ಹಲವು ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡಿದ್ದಾರೆ. ಎಂಬಿಬಿಎಸ್ ಓದುತ್ತಿದ್ದ ಸಾಗರದ ಮನಿಷಾ ಲೋಬೊ ಸುರಕ್ಷಿತವಾಗಿ ರಾಜ್ಯಕ್ಕೆ ಉಕ್ರೇನ್‍ನಿಂದ ಹಿಂದುರಿಗಿದ್ದಾರೆ.ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದ ಮನಿಷಾ ಲೋಬೊ ಜೀವ ಉಳಿಸಿಕೊಳ್ಳಲು ಬಂಕರ್ ಮೆಟ್ರೋದಲ್ಲಿ ಆಶ್ರಯ ಪಡೆದಿದ್ದರು. ಉಕ್ರೇನ್‍ನಿಂದ ಬುಧವಾರ ದೆಹಲಿಗೆ ಬಂದು ಅಲ್ಲಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 6.30ಕ್ಕೆ ಆಗಮಿಸಿದ್ದು, ಅನಿವಾಸಿ ಭಾರತೀಯ ರಾಯಭಾರಿ ಸಮಿತಿಯ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ಅವರ ಸ್ವಾಗತಿಸಿದರು. ಸಾಗರದ ಲೋಬೊ ಉಕ್ರೇನ್‍ನಲ್ಲಿ […]