ಪೊಲೀಸರಿಂದ ತಪ್ಪಿಸಿಕೊಂಡು ಮೂಸೆವಾಲ ಹತ್ಯೆಯ ಮಾಸ್ಟರ್ ಮೈಂಡ್ ಎಸ್ಕೇಪ್

ಚಂಡೀಘಡ,ಅ.2- ಪಂಜಾಬ್‍ನ ರಾಜಕಾರಣಿ ಹಾಗೂ ಗಾಯಕ ಸಿದ್ದು ಮೂಸೆವಾಲ ಹತ್ಯೆಯ ಮಾಸ್ಟರ್ ಮೈಂಡ್ ದೀಪಕ್ ಅಲಿಯಾಸ್ ಟೀನು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸಿದ್ದು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಕಿಂಗ್‍ಪಿನ್ ಆಗಿರುವ ಲಾರೆನ್ಸ್ ಬಿಷ್ಣೋಯಿ ಪರಮಾಪ್ತನಾಗಿರುವ ದೀಪಕ್ ಮೇ 29ರಂದು ನಡೆದ ಕೃತ್ಯದ ಸಂಚು ರೂಪಿಸಿದ್ದ ಮಾಸ್ಟರ್ ಮೈಂಡ್ ಎಂದೇ ಹೇಳಲಾಗಿದೆ. 15 ಜನ ಹತ್ಯೆ ಆರೋಪಿಗಳಲ್ಲಿ ಈತ ಪ್ರಮುಖನಾಗಿದ್ದ. ದೆಹಲಿ ಪೊಲೀಸರು ಬಾಡಿ ವಾರೆಂಟ್ ಮೇಲೆ ದೀಪಕ್‍ನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪಂಜಾಬ್‍ನಿಂದ ಕರೆತರುತ್ತಿದ್ದರು. ಕೇಂದ್ರ ತನಿಖಾ […]