ನೂತನ ಸಂಸತ್ ಭವನಕ್ಕೆ ‘ಅನುಭವ ಮಂಟಪ’ ಎಂದು ಹೆಸರಿಡುವಂತೆ ಒತ್ತಾಯ

ಬೆಂಗಳೂರು, ಆ. 7- ನವದೆಹಲಿಯ ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂಬ ಹೆಸರನ್ನು ನಾಮಕರಣ ಮಾಡಿ ಜಗತ್ತಿಗೆ ಪ್ರಪ್ರಥಮ ಪ್ರಜಾಪ್ರಭುತ್ವ ಸಂಸತ್ತಿನ ಕಲ್ಪನೆ ಮಾಡಿಕೊಟ್ಟಿದ್ದು ಭಾರತ ಎಂದು ತಿಳಿಯುವಂತೆ ಮಾಡಬೇಕೆಂದುವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಕೇಂದ್ರ ಸರ್ಕಾರಕ್ಕೆ ಆಗ್ರಹಪೂರ್ವಕ ಮನವಿ ಮಾಡಿದೆ. ಅನುಭವ ಮಂಟಪದ ಮುಖಾಂತರ ಬಸವಾದಿ ಶರಣರು 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ವಿಶ್ವದ ಪ್ರಪ್ರಥಮ ಸಂಸತ್ತನ್ನು ಪ್ರಾರಂಭಿಸಿ ವಿಶ್ವಕ್ಕೆ ಪ್ರಜಾಪ್ರಭುತ್ವದ ಸಂಸತ್ತಿನ ಕಲ್ಪನೆ ಕೊಟ್ಟ ದೇಶ ಭಾರತ. ಕರ್ನಾಟಕ ರಾಜ್ಯ ಸರ್ಕಾರವು ಈ ಬಗ್ಗೆ […]