ಗ್ರಾಮಸ್ಥರಿಂದಲೇ ದೇವಾಲಯದ ಜೀರ್ಣೋದ್ದಾರ

ಬೆಂಗಳೂರು,ಫೆ.1- ಸಾಧಿಸಬೇಕೆಂಬ ಛಲವೊಂದಿದ್ದರೆ ಏನು ಬೇಕಾದರೂ ಮಾಡಿ ತೋರಿಸಬಹುದು ಎಂಬುದಕ್ಕೆ ಈ ಗ್ರಾಮವೇ ನಿದರ್ಶನ. ಕೊಡುಗ ಜಿಲ್ಲೆ ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮ ನಿದರ್ಶನವಾಗಿದೆ. ಇಲ್ಲಿನ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸರ್ಕಾರದ ನೆರವು ಇಲ್ಲದೆ ದಾನಿಗಳ ಸಹಕಾರದಲ್ಲಿ ಗ್ರಾಮಸ್ಥರೇ ಸೇರಿಕೊಂಡು ನಿರ್ಮಾಣ ಮಾಡಿ ಅಚ್ಚರಿ ಹುಟ್ಟಿಸಿದ್ದಾರೆ. ಶ್ರೀ ಮಂಟಿಗಮ್ಮ ದೇವಸ್ಥಾನವು ಕುಶಾಲನಗರದಲ್ಲಿ ಅತ್ಯಂತ ಸುಪ್ರಸಿದ್ದಿ ಪಡೆದಿದೆ. ಇಲ್ಲಿ ಹರಕೆ ಹೊತ್ತು ಬಂದರೆ ಅವರ ಇಷ್ಟಾರ್ಥಗಳನ್ನೆಲ್ಲ ಈಡೇರಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿಯೇ ಬೆಂಗಳೂರು […]