“ಚುನಾವಣೆಗಾಗಿ ಬೊಮ್ಮಾಯಿ ಮನಸೋಇಚ್ಚೆ ಬಜೆಟ್ ಮಂಡನೆ”

ಬೆಂಗಳೂರು,ಫೆ.24- ಚುನಾವಣೆಯ ಕಾರಣಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನಸೋ ಇಚ್ಚೆ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಸದಸ್ಯ ಮರಿಸಿದ್ದೇಗೌಡ ಟೀಕಿಸಿದರು. ವಿಧಾನಪರಿಷತ್‍ನಲ್ಲಿ ವಿತ್ತೀಯ ಕಲಾಪದ ಮೇಲೆ ಚರ್ಚೆಯಲ್ಲಿ ಭಾಗವಹಿಸಿದ ಅವರು, ರಾಜ್ಯ ಸರ್ಕಾರ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ಆರೋಪಿಸಿದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಬ್ಯಾಕ್‍ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಚರ್ಚೆ ಮುಂದುವರೆಸಿದ ಮರಿಸಿದ್ದೇಗೌಡ ಅವರು, ವಿಶ್ವವಿದ್ಯಾನಿಲಯಗಳಿಗೆ ಅನುದಾನ ನೀಡುವ ಪದ್ದತಿಯನ್ನು ಸರ್ಕಾರ […]