800 ಕೋಟಿ ಮೈಲಿಗಲ್ಲು ದಾಟಿದ ವಿಶ್ವದ ಜನಸಂಖ್ಯೆ

ನವದೆಹಲಿ,ನ.15- ವಿಶ್ವದ ಜನಸಂಖ್ಯೆ 800 ಕೋಟಿ ತಲುಪಿದ್ದು, ಮಾನವ ಸಂಖ್ಯೆಯ ಪ್ರಮಾಣದಲ್ಲಿ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ. ಜೊತೆಗೆ ಪ್ರಮುಖ ಸವಾಲುಗಳು ಕೂಡ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ವಿಶ್ಲೇಷಿಸಿದೆ. ಜನಸಂಖ್ಯೆ ಹೆಚ್ಚಾದಂತೆಲ್ಲ ಪೌಷ್ಟಿಕತೆ, ಸಾರ್ವಜನಿಕ ಆರೋಗ್ಯ, ನೈರ್ಮಲೀಕರಣದಂತಹ ಸವಾಲುಗಳು ತೀವ್ರಗೊಳ್ಳುತ್ತವೆ. ಇವುಗಳನ್ನು ಬದಿಗೆ ಸರಿಸಿ ನಾವು ಮುಂದಡಿ ಇಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.ವಿಶ್ವಾದ್ಯಂತ ತಾರತಮ್ಯ ತೀವ್ರಗೊಂಡಿದೆ. ವಿಶ್ವದ ಜನಸಂಖ್ಯೆಯಲ್ಲಿ ಅರ್ಧ ಭಾಗದಷ್ಟು ಜನ ಖರೀದಿ ಶಕ್ತಿಯನ್ನೇ ಹೊಂದಿಲ್ಲದಷ್ಟು ಬಡತನದಿಂದ ನರಳುತ್ತಿದ್ದಾರೆ. ಮತ್ತೊಂದೆಡೆ ಶೇ.10ರಷ್ಟು ಶ್ರೀಮಂತರ ಬಳಿ ಸಂಪತ್ತು ಕ್ರೂಢೀಕರಣಗೊಂಡಿದ್ದು, ಒಟ್ಟು […]

ನಕಲಿ ಅಂಕಪಟ್ಟಿ ಜಾಲ, ಇಬ್ಬರ ಬಂಧನ

ಬೆಂಗಳೂರು,ಆ.24- ಪದವಿ ಪ್ರಮಾಣ ಪತ್ರ ಮತ್ತು ಪದವಿ ಅಂಕಪಟ್ಟಿಗಳನ್ನು ನಕಲಿಯಾಗಿ ಸೃಷ್ಟಿಸಿ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಇಬ್ಬರು ವಂಚಕರನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಅಯೂಬ್ ಪಾಷ ಅಲಿಯಾಸ್ ಅಯೂಬ್ (52) ಚಿಕ್ಕಬಳ್ಳಾಪುರದ ಖಲೀಲ್ ವುಲ್ಲಾ ಬೇಗ್ ಅಲಿಯಾಸ್ ಖಲೀಬ್ (52) ಬಂಧಿತ ಆರೋಪಿಗಳು. ಬಂಧಿತರಿಂದ ಗಜರಾಜ್ ಎಂಬಾತನ ಹೆಸರಿನಲ್ಲಿರುವ ಬಿಕಾಂ ವ್ಯಾಸಂಗದ ಎರಡು ನಕಲಿ ಪದವಿ ಪ್ರಮಾಣ ಪತ್ರಗಳು ಹಾಗೂ 1ರಿಂದ 6ನೇ ಸೆಮಿಸ್ಟಾರ್‍ನ ಒಟ್ಟು 6 ನಕಲಿ ಅಂಕಪಟ್ಟಿಗಳು, ಪಿಯೂಷ್ […]

5ಜಿ ತರಾಂಗತರಗಳ ಹರಾಜು: 1.5 ಲಕ್ಷ ಕೋಟಿಗೆ ತಲುಪಿದ ಬಿಡ್ ಆದಾಯ

ನವದೆಹಲಿ,ಜು.31- ಅತಿ ವೇಗದ ಇಂಟರ್‍ನೆಟ್ ಸೇವೆಯ ವೇದಿಕೆಯಾಗಿರುವ 5ಜಿ ತರಾಂಗತರಗಳ ಹರಾಜು ಪ್ರಕ್ರಿಯೆ 6ನೇ ದಿನವೂ ಮುಂದುವರೆದಿದ್ದು, 31ನೇ ಸುತ್ತಿನಲ್ಲಿ ಬಿಡ್‍ನ ಆದಾಯ 1.5 ಲಕ್ಷ ಕೋಟಿಗೆ ತಲುಪಿದೆ. ಭಾನುವಾರ ಬೆಳಗ್ಗೆ ಹರಾಜು ಪ್ರಕ್ರಿಯೆ ಮತ್ತೆ ಶುರುವಾಗಿದೆ. ಉತ್ತರಪ್ರದೇಶದ ಪಶ್ಚಿಮ ವೃತ್ತದ 1800 ಮೆಗಾಹಟ್ರ್ಸ್ ತರಂಗಾಂತರಗಳು ದುಬಾರಿ ಬೇಡಿಕೆಗೆ ಸೃಷ್ಟಿಸಿಕೊಂಡಿದ್ದವು. ಈಗ ಹರಾಜಿನ ಕಾವು ತಣ್ಣಗಾಗುತ್ತಿದ್ದು, ಬಹುತೇಕ ಕೊನೆಯ ಹೆಜ್ಜೆಯತ್ತ ಸಾಗಿದೆ ಎನ್ನಲಾಗಿದೆ. ಶನಿವಾರದ ಹರಾಜಿನಲ್ಲಿ 1,49,966 ಕೋಟಿ ಬಿಡ್‍ಗಳನ್ನು ಸ್ವೀಕರಿಸಲಾಗಿತ್ತು. ರಿಲೆಯನ್ಸ್, ಜಿಯೊ, ಭಾರತಿ ಏರ್‍ಟೇಲ್ […]