ಬೆಂಗಳೂರಿಗರೇ ಹುಷಾರ್, ಮಾಸ್ಕ್ ಇಲ್ಲದೆ ಹೊರಬಂದರೆ ದಂಡ ಫಿಕ್ಸ್..!

ಬೆಂಗಳೂರು,ಜ.20-ದಿನೇ ದಿನೇ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ನಗರದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮಾಸ್ಕ್ ಇಲ್ಲದೆ ನೀವು ಬೀದಿಗಿಳಿದರೆ ದಂಡ ಪಾವತಿಸಬೇಕಾಗುತ್ತದೆ. ಇರಲಿ ಎಚ್ಚರ.. ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆತು ಕೊರೊನಾ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಲು ಮಾರ್ಷಲ್‍ಗಳಿಗೆ ಸೂಚಿಸಲಾಗಿದೆ.ಮೇಲಾಕಾರಿಗಳ ಅದೇಶದ ಮೇರೆಗೆ ಇಂದಿನಿಂದಲೇ ಮಾರ್ಷಲ್‍ಗಳು ನಗರದೆಲ್ಲೆಡೆ ಸಂಚರಿಸುತ್ತ ಕೊರೊನಾ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನಕಣ್ಣಿಟ್ಟಿದ್ದಾರೆ. ಹೀಗಾಗಿ ಯಾರೇ ಆಗಲಿ ಮನೆಯಿಂದ ಹೊರ ಹೋಗುವ ಮುನ್ನ ಮಾಸ್ಕ್ ಧರಿಸಿರುವುದನ್ನು ಖಾತರಿಪಡಿಸಿಕೊಂಡ ನಂತರವೇ […]