ಬಹುಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಭಾರಿ ಬೆಂಕಿ, 6 ಮಂದಿ ಸಾವು

ಹೈದರಾಬಾದ್,ಮಾ.17- ಇಲ್ಲಿನ ಸಿಕಂದರಾಬಾದ್ನ ಬಹುಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆಯಿಂದಾಗಿ ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಸ್ವಪ್ನಲೋಕ ಕಾಂಪ್ಲೆಕ್ಸ್ ಕಟ್ಟಡದ ಐದನೇ ಮಹಡಿಯ ಕೊಠಡಿಯಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿತ್ತು. ಸಂಪೂರ್ಣ ಹೊಗೆ ಆವರಿಸಿದ್ದ ಕಟ್ಟಕ್ಕೆ ತಲುಪಲು ಹೈಡ್ರಾಲಿಕ್ ಪ್ಲಾಟ್ಫಾರ್ಮ್ ಬಳಸಲಾಯಿತು. ಕಟ್ಟಡದಲ್ಲಿದ್ದವರು ಮೊಬೈಲ್ ಟಾರ್ಚ್ ಬೆಳಗಿಸಿ ಸಹಾಯಯಾಚಿಸಿದರು. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ 12 ಜನರನ್ನು ರಕ್ಷಿಸಿದ್ದಾರೆ. ಅವರಲ್ಲಿ ಆರು ಮಂದಿ ಉಸಿರುಕಟ್ಟುವಿಕೆಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು […]