ಪೆನಾಲ್ಟಿ ಶೂಟೌಟ್ ಗೆದ್ದು ಸೆಮಿಫೈನಲ್‍ಗೆ ಪ್ರವೇಶಿಸಿದ ಮೆಸ್ಸಿ ಪಡೆ

ದೋಹಾ, ಡಿ. 10- ಕತಾರ್‍ ಫಿಫಾ ಫುಟ್ಬಾಲ್ ಟೂರ್ನಿಯಲ್ಲಿ ಕಳೆದ ತಡರಾತ್ರಿ ಲೂಸಿಯಲ್ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡವು ಶೂಟೌಟ್ ಲಾಭ ಪಡೆದು ಸೆಮಿಫೈನಲ್ ಪ್ರವೇಶಿಸಿದೆ. ಪಂದ್ಯದ ಆರಂಭಿಕ ಕ್ಷಣದಿಂದಲೂ ಎರಡು ತಂಡಗಳ ಆಟಗಾರರು ರೋಚಕ ಪ್ರದರ್ಶನ ನೀಡಿದ್ದರಿಂದ ಪಂದ್ಯ ಮುಗಿದ ಬಳಿಕ ನೆದರ್ಲೆಂಡ್ಸ್ ಹಾಗೂ ಅರ್ಜೆಂಟೀನಾ ತಂಡವು 2-2 ಗೋಲುಗಳಿಂದ ಸಮಬಲ ಸಾಧಿಸಿತ್ತು.ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್‍ನ ಮೊರೆ ಹೋಗಬೇಕಾಯಿತು. ಪಂದ್ಯದ ಆರಂಭದ 10 ನಿಮಿಷಗಳಲ್ಲೇ […]

ಟೀಮ್ ಇಂಡಿಯಾ ವರುಣನ ಕಾಟ

ಹ್ಯಾಮಿಲ್ಟನ್, ನ. 27-ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ 2 ಪಂದ್ಯದಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾಗುವ ಮೂಲಕ ಶಿಖರ್ ಧವನ್ ಸಾರಥ್ಯದ ಟೀಂ ಇಂಡಿಯಾಗೆ ಕಾಟ ಕೊಟ್ಟಿದೆ. 3 ಟ್ವೆಂಟಿ-20 ಸರಣಿಯೂ ಮಳೆ ಕಾಟದಿಂದಾಗಿ 2 ಪಂದ್ಯಗಳು ರದ್ದಾದರೂ ಕೂಡ 2ನೆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಟೀಮ್ ಇಂಡಿಯಾ ತಂಡವು ಗೆಲುವು ಸಾಧಿಸಿದ್ದ 1-0 ಯಿಂದ ಸರಣಿ ಕೈ ವಶಪಡಿಸಿಕೊಂಡಿತ್ತು. ಅಕ್ಲೆಂಡ್‍ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‍ಗಳಿಂದ […]

ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಇಬ್ಬರು ಸಾವು, 21 ಮಂದಿಗೆ ಗಾಯ

ಭುವನೇಶ್ವರ್, ಅ. 10 – ಫುಟ್ಬಾಲ್ ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಿಡಿಲು ಬಡಿದು ಆಟಗಾರ ಸೇರಿ ಇಬ್ಬರು ಸಾವನ್ನಪ್ಪಿ ಸುಮಾರು 21ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಸುಂದರ್ಗಢ್ ಜಿಲ್ಲೆಯ ನುಗಾಂವ್ ಬ್ಲಾಕನ್ ಬನೆಲಾಟಾದಲ್ಲಿ ನಡೆದಿದೆ. ಮೃತರಲ್ಲಿ ಒಬ್ಬರು ಫುಟ್ಬಾಲ್ ಆಟಗಾರರಾಗಿದ್ದರೆ, ಗಾಯಗೊಂಡವರಲ್ಲಿ ಹೆಚ್ಚಿನವರು ಪ್ರೇಕ್ಷಕರು ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯ ರಾಜಧಾನಿಯಿಂದ ಸುಮಾರು 350 ಕಿಮೀ ದೂರದಲ್ಲಿರುವ ನುಗಾಂವ್‍ನಲ್ಲಿ ಸ್ಥಳೀಯ ಕ್ಲಬ್‍ಗಳ ನಡುವೆ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತುಆಕಾಶದಲ್ಲಿ ಮೋಡ ಕವಿದಿದ್ದರೂ ಮಳೆ ಬರುತ್ತಿರಲಿಲ್ಲ ದಿಢೀರನೆ […]

ತ್ರಿವರ್ಣ ಧ್ವಜ ನಿರಾಕರಿಸಿ ವಿವಾದಕ್ಕೆ ಸಿಲುಕಿದ ಜೈಶಾ

ನವದೆಹಲಿ,ಆ.29- ಪಾಕಿಸ್ತಾನ ಮತ್ತು ಭಾರತದ ನಡುವಿನ ಹೈವೊಲ್ಟೇಜ್ ಪಂದ್ಯಾವಳಿಯ ಗೆಲುವಿನ ಸಂಭ್ರಮಾಚರಣೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಭಾರತೀಯ ತ್ರಿವರ್ಣ ಧ್ವಜ ಹಿಡಿಯಲು ನಿರಾಕರಿಸಿರುವುದು ವಿವಾದಕ್ಕೀಡಾಗಿದೆ. ನಿನ್ನೆ ದುಬೈನಲ್ಲಿ ನಡೆದ ಏಷ್ಯಾ ಕಪ್-2022ರ ಪಂದ್ಯಾವಳಿಯಲ್ಲಿ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಜೋಡಿಯ ಸಹಾಯದಿಂದ ಭಾರತ ಪಾಕಿಸ್ತಾನವನ್ನು ಐದು ವಿಕೆಟ್‍ಗಳಿಂದ ಸೋಲಿಸುವ ಹಂತದಲ್ಲಿ ಕ್ರೀಡಾಂಗಣದಲ್ಲಿ ಭಾರೀ ಕರತಾಡನ ಕೇಳಿ ಬಂತು. ಅಭಿಮಾನಿಗಳು ಚಪ್ಪಾಳೆ ತಟ್ಟಿ ತಮ್ಮ ಅಭಿಮಾನವನ್ನು ಮೆರೆದರು. ಈ ಸಂದರ್ಭದಲ್ಲಿ ಜೈ ಶಾ ಕೂಡ […]