ಲೋವಾ ಬೆಟ್ಟದಲ್ಲಿ ಸ್ಪೋಟಗೊಂಡ ಜ್ವಾಲಾಮುಖಿ

ಹವಾಯಿ, ನ.29 -ಇ ಲ್ಲಿರುವ ವಿಶ್ವದ ಅತಿದೊಡ್ಡ ಲೋವಾ ಬೆಟ್ಟದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದ್ದು ಲಾವಾ ರಸ ಚಿಮ್ಮಿದೆ, ಬಾನೆತ್ತರಕ್ಕೆ ಬೂದಿ ಹೊರಬಂದು ಆತಂಕ ಸೃಷ್ಠಿಸಿದೆ. ಸುಮಾರು 38 ಷರ್ಷದ ನಂತರ ಈ ಸನ್ನಿವೇಶ ಕಂಡುಬಂದಿದ್ದು, ಹವಾಯಿಯ ಬಿಗ್ ಐಲ್ಯಾಂಡ್‍ನಲ್ಲಿ ವಾಸಿಸುವ ಜನರು ಕೂಡಲೆ ಪಲಾಯನಕ್ಕೆ ಸಿದ್ಧರಾಗಿರಲು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಪಟ್ಟಣಗಳಿಗೆ ಅಪಾಯವನ್ನುಂಟುಮಾಡಿಲ್ಲ ಆದರೆ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಸ್ಪೋಟವು ಬಹಳ ಕ್ರಿಯಾತ್ಮಕವಾಗಿರಬಹುದು ಮತ್ತು ಲಾವಾ ಹರಿವಿನ ಸ್ಥಳ ಮತ್ತು ವೇಗವಾಗಿ ಬದಲಾಗಬಹುದು ಎಂದು ಎಚ್ಚರಿಸಿದೆ. […]