ವೈದ್ಯಕೀಯ ಸಿಬ್ಬಂದಿ ನೇಮಕಾತಿ ವಿಳಂಬ : ಮೇಲ್ಮನೆಯಲ್ಲಿ ಪ್ರತಿಪಕ್ಷ ಅಸಮಾಧಾನ

ಬೆಳಗಾವಿ,ಡಿ.28- ಪಶು ಸಂಜೀವಿನಿ ಯೋಜನೆಗೆ ಕೇಂದ್ರ ಸರ್ಕಾರದ ನೆರವಿನಲ್ಲಿ 275 ಆ್ಯಂಬುಲೆನ್ಸ್‍ಗಳನ್ನು ಖರೀದಿ ಮಾಡಲಾಗಿದ್ದರೂ, ಈವರೆಗೂ ವೈದ್ಯಕೀಯ, ಇತರ ಸಿಬ್ಬಂದಿಗಳನ್ನು ನೇಮಿಸದಿರುವ ಕುರಿತು ವಿಧಾನ ಪರಿಷತ್‍ನಲ್ಲಿ ಪ್ರತಿಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದ ಘಟನೆ ನಡೆಯಿತು. ಪ್ರಶ್ನೋತ್ತರದ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ, ರಾಜ್ಯದಲ್ಲಿ ಚರ್ಮಗಂಟು ರೋಗದಿಂದ 28 ಸಾವಿರ ಜಾನುವಾರುಗಳ ಸಾವನ್ನಪ್ಪಿವೆ. ಜುಲೈನಲ್ಲಿ ಪಶು ಸಂಜೀವಿನಿ ಯೋಜನೆ ಜಾರಿ ಮಾಡಲಾಗಿದೆ. ಭಾರೀ ಜಾಹಿರಾತ ನೀಡಿ ಪ್ರಚಾರ ಪಡೆಯಲಾಗಿದೆ. ಪ್ರತಿ ವಾಹನಕ್ಕೆ ಮೂರು ಮಂದಿ ಸಿಬ್ಬಂದಿ ಬೇಕು. […]