ತೀವ್ರ ಸ್ವರೂಪ ಪಡೆದ ಕಾಂಗ್ರೆಸ್ ಪಾದಯಾತ್ರೆ

ಬೆಂಗಳೂರು, ಮಾ.3- ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ಕಾಂಗ್ರೆಸ್‍ನಿಂದ ಆರಂಭಿಸಲಾದ ಪಾದಯಾತ್ರೆಯ ಕೊನೆ ದಿನವಾದ ಇಂದು ಹೋರಾಟ ತೀವ್ರ ಸ್ವರೂಪಕ್ಕೆ ತಲುಪಿತು. ನಿನ್ನೆ ಸಂಜೆ ನಗರದ ಅರಮನೆ ಮೈದಾನಕ್ಕೆ ತಲುಪಿದ ಪಾದಯಾತ್ರೆ ಇಂದು ಬೆಳಗ್ಗೆ ಅಲ್ಲಿಂದ ಶುರುವಾಗಿ ಕಾವೇರಿ ಥಿಯೇಟರ್ ಮೂಲಕ ಸ್ಯಾಂಕಿಟ್ಯಾಂಕ್, ಮಲ್ಲೇಶ್ವರಂನ 18ನೇ ಕ್ರಾಸ್ ಮೂಲಕ ಮಾರ್ಗೊಸಾ ರಸ್ತೆಯಲ್ಲಿ ಹಾದು ಕೆ.ಸಿ.ಜನರಲ್ ಆಸ್ಪತ್ರೆ, ಶೇಷಾದ್ರಿಪುರಂ ಲಿಂಕ್ ರಸ್ತೆ, ರಾಜೀವ್‍ಗಾಂಧಿ ಪ್ರತಿಮೆ, ಫ್ಲಾಟ್‍ಫಾರಂ ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ತಲುಪಿದೆ. ಅಲ್ಲಿಂದ ಮೆಜೆಸ್ಟಿಕ್ […]