ಮೂರನೆ ದಿನಕ್ಕೆ ಕಾಲಿಟ್ಟ ಪಾದಯಾತ್ರೆ

ಬೆಂಗಳೂರು,ಮಾ.2- ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಇಂದು ಮೂರನೆ ದಿನಕ್ಕೆ ಕಾಲಿಟ್ಟಿದ್ದು, ನಗರದ 10ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗಲಿದೆ. ಬೆಳಗ್ಗೆ ಬಿಟಿಎಂ ಲೇಔಟ್‍ನ ಒಂದನೇ ಹಂತದ ಹಾಫ್‍ಕಾಮ್ಸ್ ಜಂಕ್ಷನ್‍ನಿಂದ ಶುರುವಾದ ಪಾದಯಾತ್ರೆ, ಗಂಗೋತ್ರಿ ಸರ್ಕಲ್, ಮಾರುತಿನಗರ ಮುಖ್ಯರಸ್ತೆ, ಹೊಸೂರು ಮುಖ್ಯರಸ್ತೆ, ಸರ್ಜಾಪುರ ಜಂಕ್ಷನ್, ಮಡಿವಾಳ ಚೆಕ್‍ಪೋಸ್ಟ್, ಪೋರಂ ಮಾಲ್, ಕೋರಮಂಗಲದ 20ನೇ ಮುಖ್ಯರಸ್ತೆ, 80ಅಡಿ ರಸ್ತೆ, ಮೈಕ್ರೋ ಲ್ಯಾಂಡ್ ಜಂಕ್ಷನ್, ಮಂಗಳ ಕಲ್ಯಾಣ ಮಂಟಪ, ಗಣಪತಿ ದೇವಸ್ಥಾನ, ಬೇತನಿ ಸ್ಕೂಲ್ […]

ಕಾಂಗ್ರೆಸ್ ಪಾದಯಾತ್ರೆಯಿಂದ ಕಿರಿಕಿರಿ, ಜನರ ಕ್ಷಮೆ ಕೇಳಿದ ಡಿಕೆಶಿ

ಬೆಂಗಳೂರು, ಮಾ.1- ನೀರಿಗಾಗಿ ನಡಿಗೆ ಮೇಕೆದಾಟು ಪಾದಯಾತ್ರೆ ಬೆಂಗಳೂರು ಪ್ರವೇಶಿಸಿದ್ದು, ಇಂದಿನಿಂದ ಮೂರು ದಿನಗಳ ಕಾಲ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲು ಸಂಚರಿಸಲಿದ್ದು, ಅನಿವಾರ್ಯವಾಗಿ ಎದುರಾಗುವ ಸಂಚಾರ ದಟ್ಟಣೆಗೆ ಕ್ಷಮೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಫೆ.27ರಿಂದ ಎರಡನೇ ಹಂತದಲ್ಲಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ಆರಂಭಿಸಿದೆ. ಮೊದಲ ದಿನ ರಾಮನಗರದಿಂದ ಪಾದಯಾತ್ರೆ ಶುರುವಾದಾಗ ಮೈಸೂರು, ಮಂಡ್ಯ ಭಾಗದ ಜನ ಸಂಚಾರ ದಟ್ಟಣೆಯಿಂದ ಹೈರಾಣಾಗಿ ಹೋಗಿದ್ದರು. ಎರಡನೇ ದಿನ ಪರಿಸ್ಥಿತಿ ಸುಧಾರಣೆಯಾಗಿದ್ದು, ನಿನ್ನೆ ಕೆಂಗೇರಿಗೆ ಪಾದಯಾತ್ರೆ […]

ಮಾರ್ಚ್ 3ಕ್ಕೆ ಬೆಂಗಳೂರಿನಲ್ಲಿ ಅಂತ್ಯವಾಗಲಿದೆ ಮೇಕೆದಾಟು ಪಾದಯಾತ್ರೆ

ಬೆಂಗಳೂರು, ಫೆ.23- ಮೇಕೆದಾಟು ಯೋಜನೆ ಶೀಘ್ರ ಆರಂಭಕ್ಕೆ ಒತ್ತಾಯಿಸಿ ಮರು ಆರಂಭಗೊಳ್ಳುತ್ತಿರುವ ಪಾದಯಾತ್ರೆ ಮಾರ್ಚ್ 3ಕ್ಕೆ ಬೆಂಗಳೂರಿನಲ್ಲಿ ಅಂತ್ಯವಾಗಲಿದೆ. ಫೆ.27ರಂದು ಬೆಳಗ್ಗೆ 9 ಗಂಟೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಮಂಡಲದ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಪಾದಯಾತ್ರೆ ಯಶಸ್ಸಿಗೆ ಪಣ ತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿನ್ನೆ ಮಂಡ್ಯ […]