ವಿಧಾನ ಪರಿಷತ್‌ನಲ್ಲಿ ಸದಸ್ಯರ ಗೈರು, ಕಲಾಪ ಮುಂದೂಡಿಕೆ

ಬೆಂಗಳೂರು,ಫೆ.13- ಸಚಿವರ ಗೈರು ಹಾಜರಿಯಿಂದ ವಿಧಾನ ಪರಿಷತ್ನಲ್ಲಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದ ಪ್ರಸಂಗ ನಡೆಯಿತು. ಇಂದು ಬೆಳಗ್ಗೆ ಕಲಾಪದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಚಿವರಾದ ಸಿ.ಸಿ.ಪಾಟೀಲ್, ಗೋವಿಂದ ಕಾರಜೋಳ್, ಡಾ.ಸುಧಾಕರ್, ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಆನಂದ್ ಸಿಂಗ್ ಗೈರು ಹಾಜರಿಗೆ ಅನುಮತಿ ಕೇಳಿದ್ದಾರೆ ಎಂದರು. ಸಿ.ಸಿ.ಪಾಟೀಲ್ ಜಾತ್ರೆಯೊಂ ದರಲ್ಲಿ ಭಾಗವಹಿಸಲು, ಆನಂದ್ ಸಿಂಗ್ ಅನಾರೋಗ್ಯದಿಂದ, ಡಾ.ಸುಧಾಕರ್ ಏರ್ಶೋದಲ್ಲಿ ಪ್ರಧಾನಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಗೈರು ಹಾಜರಿ ಅನುಮತಿ ಕೇಳಿದ್ದಾರೆ ಎಂದು ಸಭಾಪತಿ […]