ಕುಟುಂಬಸ್ಥರಿಗೆ ಟಿಕೆಟ್ ಕೊಡಿಸಲು ಬಿಜೆಪಿ ಭಾರೀ ಲಾಬಿ..

ಬೆಂಗಳೂರು,ನ.24- ಕುಟುಂಬ ರಾಜಕಾರಣವನ್ನೇ ವಿರೋಧಿಸುತ್ತಲೇ ಕೇಂದ್ರ ಮತ್ತು ದೇಶದ ವಿವಿಧ ಕಡೆ ಅಧಿಕಾರಕ್ಕೆ ಬಂದಿರುವ ಬಿಜೆಪಿಯಲ್ಲಿ ತಮ್ಮ ಪುತ್ರರು ಹಾಗೂ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡಿಸಲು ಲಾಬಿ ಆರಂಭವಾಗಿದೆ. ಸರಿಸುಮಾರು ಎರಡು ಡಜನ್‍ಗೂ ಅಧಿಕ ಆಕಾಂಕ್ಷಿಗಳು ತಮ್ಮ ಪುತ್ರರು, ಪುತ್ರಿಯರು, ಸಹೋದರ, ತಾಯಿಂದಿರಿಗೆ ಟಿಕೆಟ್ ಕೊಡಿಸಿ ಕಣಕ್ಕಿಳಿಸಲು ಗಾಡ್‍ಫಾದರ್‍ಗಳ ಮೊರೆ ಹೋಗಿದ್ದಾರೆ. ಕುಟುಂಬ ರಾಜಕಾರಣದಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರಿ ಸಾರಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದರೂ ನಮಗೂ ಅದಕ್ಕೂ ಸಂಬಂಧವೇ […]

ಮಹಾರಾಷ್ಟ್ರದಲ್ಲಿ ನಿಷೇಧಿತ PFI ಸಂಘಟನೆಯ 4 ಸದಸ್ಯರ ಬಂಧನ

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ರಾಯಗಡ ಜಿಲ್ಲೆಯ ಪನ್ವೇಲ್‍ನಿಂದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‍ಐ) ನಾಲ್ವರು ಸದಸ್ಯರನ್ನು ಬಂಧಿಸಿದೆ.

ಸಿಎಂ ಭೇಟಿಯಾದ ಡಾ.ರಾಜ್‍ ಕುಟುಂಬ ಸದಸ್ಯರು

ಬೆಂಗಳೂರು,ಆ.17- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಡಾ.ರಾಜ್‍ಕುಮಾರ್ ಕುಟುಂಬ ಸದಸ್ಯರು ಭೇಟಿಯಾಗಿ ಮಾತುಕತೆ ನಡೆಸಿದರು. ರೇಸ್ ಕೋರ್ಸ್ ನಿವಾಸದಲ್ಲಿ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನಿತ್ ರಾಜಕುಮಾರ ಮತ್ತು ರೇನ್ ರಾಮ್ ಕುಮಾರ್ ಸಿಎಂ ಭೇಟಿಯಾಗಿ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿ, ಪುನೀತ್ ಸಮಾಧಿ ಮತ್ತು ಪಾರ್ವತಮ್ಮ ಸಮಾಧಿ ಸ್ಥಳವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು. ಒಂದೇ ಸ್ಥಳದಲ್ಲಿ ಮೂರು ಜನರ ಸಮಾಧಿ ಇದೆ ಇದರ ಅಭಿವೃದ್ಧಿ ವಿಚಾರವಾಗಿ ಸಿಎಂ ಜೊತೆ ಚರ್ಚೆ ನಡೆಸಿದರು. ಈ […]

ಕೊಪ್ಪಳ : ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದುರ್ಮರಣ

ಕೊಪ್ಪಳ,ಜು.24- ಸ್ಕಾರ್ಪಿಯೋಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಕನೂರು ತಾಲ್ಲೂಕಿನ ಬಾನಾಪುರದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಗಾಯಗೊಂಡಿರುವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಬಿನ್ನಾಳ ಗ್ರಾಮದ ದೇವಪ್ಪಕೊಪ್ಪದ (62), ಗಿರಿಜಮ್ಮ(45), ಶಾಂತಮ್ಮ (32), ಪಾರ್ವತಮ್ಮ(32), ಕಸ್ತೂರಮ್ಮ(22) ಮೃತಪಟ್ಟ ದುರ್ದೈವಿಗಳು. ಕೊಪ್ಪಳದಲ್ಲಿ ನಡೆದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಬಿನ್ನಾಳ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಈ ವಾಹನದಲ್ಲಿ ಒಟ್ಟು 9 […]