ಅ.12ರವರೆಗೆ ಮುಂದುವರೆಯಲಿದೆ ಮೋದಿ ಸ್ಮರಣಿಕೆಗಳ ಹರಾಜು ಪ್ರಕ್ರಿಯೆ

ನವದೆಹಲಿ, ಅ.8-ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಡೆದಿರುವ ಸ್ಮರಣಿಕೆಗಳ ಹರಾಜು ಪ್ರಕ್ರಿಯೆ ಅ.12ರವರೆಗೆ ಮುಂದುವರೆಯಲಿದೆ. ಸ್ಮರಣಿಕೆಗಳ ಹರಾಜು ಅ.12 ರಂದು ಮುಕ್ತಾಯಗೊಳ್ಳುತ್ತದೆ. ನವದೆಹಲಿಯಲ್ಲಿರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‍ಗೆ ಭೇಟಿ ನೀಡಿ ಸ್ಮರಣಿಕೆಗಳನ್ನು ಖರೀದಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹರಾಜಿನಿಂದ ಬರುವ ಆದಾಯವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗುವುದು ಎಂದು ಸಂಸ್ಕøತಿ ಸಚಿವಾಲಯ ತಿಳಿಸಿದೆ. ಕಳೆದ ಕೆಲವು ವರ್ಷಗಳಿಂದ, ಪ್ರಧಾನಿ ನರೇಂದ್ರ ಮೋದಿಯವರು ಐತಿಹಾಸಿಕ ಉಡುಗೊರೆಗಳಲ್ಲಿ ಸೊಗಸಾದ ವರ್ಣಚಿತ್ರಗಳು, ಶಿಲ್ಪಗಳು, ಕರಕುಶಲ ವಸ್ತುಗಳು ಮತ್ತು ಜಾನಪದ […]