ನೀರಾವರಿ ಯೋಜನೆಗಳಲ್ಲಿ ನ್ಯಾಯಕ್ಕಾಗಿ ಮೋದಿ ಬಳಿ ಎಚ್‍ಡಿಡಿ ಮನವಿ

ನವದೆಹಲಿ,ಡಿ.14-ಕಾವೇರಿ, ಕೃಷ್ಣಾ, ಮಹಾದಾಯಿ ನೀರಾವರಿ ಯೋಜನೆಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿರುವ ವಿಷಯವನ್ನು ವಿವರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದು ನ್ಯಾಯ ಒದಗಿಸುವಂತೆ ಕೋರಿರುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ನಿನ್ನೆ ಸಂಸತ್‍ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಮ್ಮ ನೀರಾವರಿ ವಿಚಾರವನ್ನು ಪ್ರಧಾನಿ ಅವರೊಂದಿಗೆ ಪ್ರಸ್ತಾಪಿಸಿ, ರಾಜ್ಯದ ಯೋಜನೆಗಳಿಗೆ ಆಗಿರುವ ಅನ್ಯಾಯವನ್ನು ವಿವರಿಸಿದ್ದೇನೆ ಎಂದು ಹೇಳಿದ್ದಾರೆ. ಈ ಜಾಗದಲ್ಲಿ ಕೂತು ತೀರ್ಮಾನ ಮಾಡುವುದು ಹಿಂಸೆಯಾಗಿದೆ. ನದಿ ನೀರಿನ […]