ಅಭಿಮಾನಿಗಳ 13 ವರ್ಷಗಳ ಕನಸು ನನಸು, ವಿಷ್ಣು ಸ್ಮಾರಕ ಲೋಕಾರ್ಪಣೆ

ಮೈಸೂರು,ಜ29- ಬಹುವರ್ಷಗಳಿಂದ ವಿಷ್ಣುವರ್ಧನ್ ಅಭಿಮಾನಿಗಳು ಎದುರು ನೋಡುತ್ತಿದ್ದ ವಿಷ್ಣು ಸ್ಮಾರಕ ಇಂದು ಮೈಸೂರಿನ ಉದ್ಭೂರಿನಲ್ಲಿ ಲೋಕಾರ್ಪಣೆಗೊಂಡಿದೆ. ಕಳೆದ 13 ವರ್ಷಗಳ ಕನಸು ನನಸಾಗಿದ್ದು, ವಿಷ್ಣು ಅಭಿಮಾನಿಗಳಲ್ಲಿ ಉತ್ಸಾಹ ಇಮ್ಮಡಿಗೊಂಡಿತ್ತು. ವಿಷ್ಣುವರ್ಧನ್ ಅವರ ತವರೂರಿನಲ್ಲಿ ಅವರ ಸ್ಮಾರಕ ಉದ್ಘಾಟನೆಯಾಗುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಸ್ಮಾರಕ ಉದ್ಘಾಟನೆ ಅಂಗವಾಗಿ ಇತ್ತ ವಿಷ್ಣು ಪುಣ್ಯ ಭೂಮಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಮೊದಲಿಗೆ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ ಡಾ.ವಿಷ್ಣುವರ್ಧನ್ ಉದ್ಯಾನವನದ […]