ಕಾರಾಗೃಹದ ಮೇಲೆ ಬಂದೂಕುಧಾರಿಗಳಿಂದ ದಾಳಿ, 14 ಮಂದಿ ಸಾವು, 24 ಕೈದಿಗಳು ಪರಾರಿ

ಮೆಕ್ಸಿಕೊ,ಜ.2- ಇಲ್ಲಿನ ಕಾರಾಗೃಹದ ಮೇಲೆ ಬಂದೂಕುಧಾರಿಗಳಿಂದ ಭೀಕರ ದಾಳಿ ನಡೆದ ಪರಿಣಾಮ 10 ಭದ್ರತಾ ಸಿಬ್ಬಂದಿ ಮತ್ತು ನಾಲ್ವರು ಕೈದಿಗಳು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಟಕ್ಸಾಸ್‍ನ ಎಲ್‍ಪಾಸೋ ಪ್ರಾಂತ್ಯದ ಗಡಿಯಾಚೆಗಿನ ಸಿಯುಡಾಡ್, ಜುರೇಜ್ ಎಂಬಲಿರುವ ಮೆಕ್ಸಿಕೋದ ಕಾರಾಗೃಹದ ಮೇಲೆ ಬಂದೂಕುಧಾರಿಗಳು ಏಕಾಏಕಿ ದಾಳಿ ಮಾಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಹಲವು ಶಸ್ತ್ರಸಜ್ಜಿತ ವಾಹನಗಳೊಂದಿಗೆ ಬಂದ ಬಂದೂಕುಧಾರಿಗಳು ಕಾವಲುಗಾರರ ಮೇಲೆ ಗುಂಡಿನ ಮಳೆಗೆರೆದರು ಎಂದು ಚಿವಾಹೊ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ. ಈ ಘಟನೆಯಲ್ಲಿ 13 ಜನ ಗಾಯಗೊಂಡಿದ್ದಾರೆ. ಇದೇ […]