ಮಾವೋವಾದಿ ಕ್ರೌರ್ಯ ಖಂಡಿಸಲು ಸಾಮಾಜಿಕ ಮಾಧ್ಯಮ ಬಳಕೆಗೆ ಸೂಚನೆ

ನವದೆಹಲಿ,ಫೆ.13- ಮಾವೋವಾದಿಗಳ ಹಿಂಸಾತ್ಮಕ ಕ್ರೌರ್ಯ ಮತ್ತು ದೌರ್ಜನ್ಯಗಳನ್ನು ಖಂಡಿಸಲು ನಾಗರಿಕರು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಮನವಿ ಮಾಡಿದೆ. ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಲಭ್ಯವಿರುವ ಯಾವುದೇ ವೇದಿಕೆಯಲ್ಲಿ ಸಿಪಿಐ(ಮಾವೋವಾದಿಗಳು ಮತ್ತು ಎಲ್‍ಡಬ್ಲುಇ) ಗುಂಪುಗಳು ಅಮಾಯಕ ನಾಗರಿಕರ ಮೇಲೆ ನಡೆಸುತ್ತಿರುವ ಹಿಂಸಾತ್ಮಕ ದೌರ್ಜನ್ಯವನ್ನು ಖಂಡಿಸಿ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ದೇಶ ನಿರ್ಮಾಣ ಪ್ರಕ್ರಿಯೆಗೆ ಮಾವೋವಾದಿಗಳ ಸಿದ್ದಾಂತ ಅಪಾಯ ಉಂಟು ಮಾಡುತ್ತಿದೆ. ಈ ಸಂಬಂಧ ನಾಗರಿಕರು ಎಚ್ಚೆತ್ತುಕೊಂಡು ಸಂವೇದಶೀಲರಾಗಿರಬೇಕು. ಮಾವೋವಾದಿ ದಂಗೆಕೋರರನ್ನು ಬಹುಕಾಲದವರೆಗೆ […]