ಮಧ್ಯವಯಸ್ಕರಿಗೆ ಮಾರಿಯಾಗುತ್ತಿದೆ ಕಿಲ್ಲರ್ ಕೊರೊನಾ

ಬೆಂಗಳೂರು,ಜ.13-ನೀವು ಮಧ್ಯ ವಯಸ್ಕರೆ ಹಾಗಾದರೆ ಇರಲಿ ಎಚ್ಚರ. ಯಾಕೇ ಅಂತೀರಾ…ಕಳೆದ ಹತ್ತು ದಿನಗಳಿಂದ ಕೊರೊನಾ ಹೆಮ್ಮಾರಿ 50 ವರ್ಷ ದಾಟಿದವರ ಮೇಲೆ ಹೆಚ್ಚು ದಾಳಿ ನಡೆಸಿ ಸಾವು-ನೋವಿಗೆ ಕಾರಣವಾಗುತ್ತಿರುವುದು ದಿಗಿಲು ಹುಟ್ಟಿಸಿದೆ. ಕಳೆದ 12 ದಿನಗಳಲ್ಲಿ ರಾಜ್ಯದಲ್ಲಿ 55 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. 55 ಮಂದಿಯಲ್ಲಿ 48 ಮಂದಿ 50 ವರ್ಷ ದಾಟಿದವರು ಎಂಬುದು ದಾಖಲೆಗಳಿಂದ ಬಹಿರಂಗಗೊಂಡಿದೆ. ಕೊರೊನಾ ಮಹಾಮಾರಿಗೆ 15 ವರ್ಷದ ಬಾಲಕ ಹಾಗೂ 40 ವರ್ಷ ಮೇಲ್ಪಟ್ಟ ಆರು ಜನರು ಬಿಟ್ಟರೆ ಉಳಿದವರೆಲ್ಲಾ […]